ದೇಶ

ಜ.22ಕ್ಕೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ: '11 ದಿನಗಳ ವಿಶೇಷ ಆಚರಣೆ' ಆರಂಭಿಸಿದ ಪ್ರಧಾನಿ ಮೋದಿ; ಆಡಿಯೊ ಸಂದೇಶ

Sumana Upadhyaya

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಶುಕ್ರವಾರ ದೇಶದ ಜನತೆಗೆ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

"ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಕೇವಲ 11 ದಿನಗಳು ಉಳಿದಿವೆ. ನಾನು ಕೂಡ ಈ ಪವಿತ್ರ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಪಾಲಿಗೆ ಅದೃಷ್ಟ. ಈ ಸಮಯದಲ್ಲಿ ಭಾರತದ ನಾಗರಿಕರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸೃಷ್ಟಿಸಿದನು. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳು ವಿಶೇಷ ಸಂಪ್ರದಾಯವನ್ನು ನಾನು ಆಚರಿಸುತ್ತಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಡಿಯೊ ಸಂದೇಶ ಪೋಸ್ಟ್ ಮಾಡಿದ್ದು, ಪ್ರಾಣ ಪ್ರತಿಷ್ಠಪನೆ ಐತಿಹಾಸಿಕ ಮತ್ತು ಶುಭಕರ ಸಂದರ್ಭವಾಗಿದ್ದು, ಅದಕ್ಕೆ ಸಾಕ್ಷಿಯಾಗುತ್ತಿರುವ ನಾನು ಅದೃಷ್ಟಶಾಲಿ ಎಂದಿದ್ದಾರೆ.

ನಾನು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಇಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ ಎಂದಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಂಬಂಧಿಸಿದ ಗ್ರಂಥಗಳಲ್ಲಿ ವಿವರಿಸಿರುವ ಕಠಿಣ ಮಾರ್ಗಸೂಚಿಗಳನ್ನು ಪ್ರಧಾನಿ ಮೋದಿ ಅನುಸರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT