ದೇಶ

ಭಾರತದ ಸಮೀಪವೇ ಹಡಗುಗಳ ಮೇಲೆ ದಾಳಿ ತೀವ್ರ ಕಳವಳಕಾರಿ: ಕೆಂಪು ಸಮುದ್ರದ ಬಿಕ್ಕಟ್ಟಿನ ಬಗ್ಗೆ ಜೈಶಂಕರ್

Srinivas Rao BV

ತೆಹ್ರಾನ್: ಭಾರತದ ಸಮೀಪದಲ್ಲಿ ಹಡಗುಗಳ ಮೇಲೆ ದಾಳಿ ನಡೆದಿರುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೀವ್ರ ಕಳವಳಕಾರಿ ಎಂದು ಹೇಳಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಇಂತಹ ಬೆದರಿಕೆಗಳು ಭಾರತದ ಇಂಧನ ಮತ್ತು ಆರ್ಥಿಕ ಹಿತಾಸಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಈ ಪರಿಸ್ಥಿತಿ" ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

"ಇತ್ತೀಚೆಗೆ ಹಿಂದೂ ಮಹಾಸಾಗರದ ಈ ಪ್ರಮುಖ ಭಾಗದಲ್ಲಿ ಕಡಲ ವಾಣಿಜ್ಯ ಸಂಚಾರದ ಸುರಕ್ಷತೆಗೆ ಎದುರಾಗುತ್ತಿರುವ ಬೆದರಿಕೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ" ಎಂದು ಅವರು ಇರಾನ್ ನ ವಿದೇಶಾಂಗ ಸಚಿವ ಹೊಸೆನ್ ಅಮಿರಾಬ್ಡೊಲ್ಲಾಹಿಯಾನ್ ಅವರೊಂದಿಗೆ ವ್ಯಾಪಕ ಮಾತುಕತೆಯ ನಂತರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರಿಂದ ಕೆಂಪು ಸಮುದ್ರದಲ್ಲಿ ಒಂದಾದ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸುವ ಸ್ಪಷ್ಟ ಉಲ್ಲೇಖದಲ್ಲಿ ಈ ಸಮಸ್ಯೆಯನ್ನು "ವೇಗವಾಗಿ ಪರಿಹರಿಸುವುದು" ಮುಖ್ಯ ಎಂದು ಜೈಶಂಕರ್ ತಿಳಿಸಿದ್ದಾರೆ.

ಹೌತಿ ಬಂಡುಕೋರರು ಹಾರಿಸಿದ ಕ್ಷಿಪಣಿ ಯೆಮೆನ್‌ನ ಕರಾವಳಿಯ ಏಡೆನ್ ಕೊಲ್ಲಿಯಲ್ಲಿ US-ಮಾಲೀಕತ್ವದ ಹಡಗನ್ನು ಹೊಡೆದ ದಿನದಂದೇ ಜೈಶಂಕರ್ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಒಂದು ದಿನದ ಹಿಂದೆ, ವರದಿಗಳ ಪ್ರಕಾರ, ಹೌತಿ ಅಮೆರಿಕದ ವಿಧ್ವಂಸಕ ನೌಕೆಯ ಕಡೆಗೆ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಯನ್ನು ಹಾರಿಸಿತ್ತು.

ಯುಎಸ್ ಮತ್ತು ಯುಕೆ ಕಳೆದ ವಾರ ಯೆಮೆನ್‌ನಲ್ಲಿರುವ ಹೌತಿ ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿಯನ್ನು ನಡೆಸಿದ್ದವು.

SCROLL FOR NEXT