ಸಾಂದರ್ಭಿಕ ಚಿತ್ರ 
ದೇಶ

ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ರಾಮಜನ್ಮಭೂಮಿ ಹೋರಾಟದಿಂದ ಸನ್ಯಾಸಿಯಾದೆ ಎಂದು ಹೇಳಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜನವರಿ 22 ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಬುಧವಾರ ತಳ್ಳಿ ಹಾಕಿದ್ದಾರೆ. 

ಲಖನೌ: ರಾಮಜನ್ಮಭೂಮಿ ಹೋರಾಟದಿಂದ ಸನ್ಯಾಸಿಯಾದೆ ಎಂದು ಹೇಳಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜನವರಿ 22 ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಬುಧವಾರ ತಳ್ಳಿ ಹಾಕಿದ್ದಾರೆ. 

ಮೊದಲಿನಿಂದಲೂ ರಾಮ ಮಂದಿರ ಹೋರಾಟದಲ್ಲಿ ಸಂಬಂಧ ಹೊಂದಿದ್ದೇನೆ. ವಾಸ್ತವವಾಗಿ, ರಾಮಜನ್ಮಭೂಮಿ ಹೋರಾಟದಿಂದ ನಾನು ಸನ್ಯಾಸಿಯಾದೆ. ಆದರೆ, ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ಯಾವುದೇ ಕ್ರೆಡಿಟ್ ತೆಗೆದುಕೊಳ್ಳಲು ನಾನು ಉದ್ದೇಶಿಸಿಲ್ಲ. ನಾವು ರಾಮನ ಸೇವಕರಾಗಿ ಅಯೋಧ್ಯೆಗೆ ಹೋಗುತ್ತಿದ್ದೇವೆ ಎಂದು ಟಿವಿ ಚಾನೆಲ್ ವೊಂದರಲ್ಲಿ ಹೇಳಿದರು. 

ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರಿಗೆ ನೀಡಲಾಯಿತು ಆದರೆ ಅವರು ಅದರ ಭಾಗವಾಗಲು ನಿರಾಕರಿಸಿದ್ದಾರೆ.“ರಾಮ ಮಂದಿರಕ್ಕೆ ಬರುವುದನ್ನು ಯಾರನ್ನೂ ತಡೆದಿಲ್ಲ. ರಾಮನ ಸೇವಕರಾಗಿ ಬರುವವರನ್ನು ಸ್ವಾಗತಿಸಲಾಗುತ್ತದೆ ಎಂದು ಅವರು ಟೀಕಿಸಿದರು.

ಇದು ಕ್ರೆಡಿಟ್ ತೆಗೆದುಕೊಳ್ಳುವ ಸಮಯವಲ್ಲ ಎಂದು ಹೇಳಿದ ಯೋಗಿ ಆದಿತ್ಯನಾಥ್, ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಮ್ಮ ಗುರುದೇವ್ ಮಹಂತ್ ಅವೈದ್ಯನಾಥಜಿ ಅವರ ಪಾತ್ರವನ್ನು ವಿವರಿಸಿದರು.

ಈ ಹೋರಾಟದಲ್ಲಿ “3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಮತ್ತು ದೇವಾಲಯದ ಪುನಶ್ಚೇತನಕ್ಕಾಗಿ 76 ಕ್ಕೂ ಹೆಚ್ಚು ಸಂಘರ್ಷಗಳು ನಡೆದವು. ಗೋರಕ್ಷನಾಥ ಪೀಠಕ್ಕೆ ಜನರು ಆಗಾಗ ಬರುತ್ತಿದ್ದರು. ಆ ಹೋರಾಟದ ಫಲವಾಗಿ ಇಂದು ದೇವಾಲಯ ತಲೆ ಎತ್ತಿದೆ' ಎಂದು ಸಿಎಂ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT