ದೇಶ

ಪ್ರಾಣಪ್ರತಿಷ್ಠೆ ಮುನ್ನ ರಾಮ ಲಲ್ಲಾ ಮೂರ್ತಿ ಫೋಟೋ ಸೋರಿಕೆ: ಕಠಿಣ ಕ್ರಮಕ್ಕೆ ದೇವಸ್ಥಾನ ಟ್ರಸ್ಟ್ ಚಿಂತನೆ

Sumana Upadhyaya

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಮುನ್ನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ರಾಮ್ ಲಲ್ಲಾ ವಿಗ್ರಹದ ಫೋಟೋಗಳು ಸೋರಿಕೆಯಾಗಿ ಎಲ್ಲೆಡೆ ವೈರಲ್ ಆಗಿದ್ದು, ಶ್ರೀ ರಾಮತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಕಂಗೆಡಿಸಿದೆ. 

ಮೈಸೂರಿನ ಶಿಲ್ಪಿ ಅರುಣ್ ಜೋಗಿರಾಜ್ ಅವರು ಕೆತ್ತಿದ ನಿಂತಿರುವ ಭಂಗಿಯಲ್ಲಿರುವ ರಾಮ ದೇವರ ಬಾಲ ವಿಗ್ರಹದ ಮೊದಲ ಚಿತ್ರ ನಿನ್ನೆ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇಂದು ಇಂದು ದೇಶಾದ್ಯಂತ ಮಾಧ್ಯಮಗಳಲ್ಲಿ ಸಹ ಪ್ರಸಾರವಾಗಿದೆ. 

'ಶ್ಯಾಮಲ್' (ಕಪ್ಪು ಬಣ್ಣದ ಮೂರ್ತಿ) ವಿಗ್ರಹದ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು.. ಮೂರ್ತಿಯ ಫೋಟೋಗಳನ್ನು ಯಾರು ಕ್ಲಿಕ್ಕಿಸಿದರು, ಅದು ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ದೇವಾಲಯದ ಟ್ರಸ್ಟ್ ಆಗಲಿ ಇತರ ಸಂಬಂಧಪಟ್ಟ ಅಧಿಕಾರಿಗಳು ಬಿಟ್ಟುಕೊಡುತ್ತಿಲ್ಲ. 

ದೇವಾಲಯದಲ್ಲಿ ಪ್ರಾಣಪ್ರತಿಷ್ಠೆಯ ನಂತರವಷ್ಟೇ ಮೂರ್ತಿಯ ಅದರಲ್ಲೂ ಮೂರ್ತಿಯ ಕಣ್ಣುಗಳ ಚಿತ್ರವನ್ನು ಹೊರಗೆ ಬಿಡುಗಡೆ ಮಾಡಬಹುದು ಎಂಬ ನಿಯಮವಿದೆ. ಈ ಮಧ್ಯೆ, ಚಿತ್ರಗಳನ್ನು ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

SCROLL FOR NEXT