ಅಯೋಧ್ಯೆ: ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಭಗವಾನ್ ರಾಮನ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.
ಪ್ರತಿಷ್ಠಾಪನೆಗೂ ಮುನ್ನ ಕಣ್ಣಿನ ಪಟ್ಟಿ ಕಟ್ಟಲಾಗಿರುತ್ತದೆ. ಆದರೆ ಕಣ್ಣಿನ ಪಟ್ಟಿ ಇಲ್ಲದೇ ಇರುವ ವಿಗ್ರಹ ಫೋಟೊ ಬಹಿರಂಗಗೊಂಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯಬೇಕೆಂದು ಅಯೋಧ್ಯೆಯ ಮುಖ್ಯ ಅರ್ಚಕರು ಆಗ್ರಹಿಸಿದ್ದಾರೆ.
ಗರ್ಭಗುಡಿಯಲ್ಲಿ ಇರಿಸಲಾಗಿದ್ದ ವಿಗ್ರಹದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಪ್ರಾಣಪ್ರತಿಷ್ಠಾಪನೆಗೂ ಮುನ್ನ ಭಗವಾನ್ ರಾಮನ ವಿಗ್ರಹದ ಕಣ್ಣುಗಳು ಹೊರಪ್ರಪಂಚಕ್ಕೆ ತೋರುವಂತಿಲ್ಲ ಎಂಬುದು ನಿಯಮ. ಆದರೆ ಕಣ್ಣುಗಳು ಕಾಣುವ ರೀತಿಯಲ್ಲಿ ವಿಗ್ರಹದ ಫೋಟೋವನ್ನು ಬಹಿರಂಗಗೊಳಿಸಿರುವುದರ ಬಗ್ಗೆ ತನಿಖೆಯಾಗಬೇಕು ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು ಯಾವುದೇ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರು.