ದೇಶ

ಪ್ರಧಾನಿ ಮೋದಿಯನ್ನು 'ತಪಸ್ವಿ' ಎಂದು ಶ್ಲಾಘಿಸಿದ ಮೋಹನ್ ಭಾಗವತ್

Lingaraj Badiger

ಅಯೋಧ್ಯೆ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಯನ್ನು ತಪಸ್ವಿ ಎಂದು ಶ್ಲಾಘಿಸಿದ್ದಾರೆ.

ಇಂದು ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಸಮಾರಂಭದಲ್ಲಿ ಭಾಗವಹಿಸಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾದಿ ಭಾಗವತ್ ಅವರು, ಪ್ರಧಾನಿ ಮೋದಿ ಅವರು ಅಗತ್ಯಕ್ಕಿಂತ ಹೆಚ್ಚು ಕಠಿಣ ಧಾರ್ಮಿಕ ವ್ರತಾಚರಣೆ ಮಾಡಿದ್ದಾರೆ ಎಂದು ಹೇಳಿದರು.

“ಸೋಮವಾರದ ಪ್ರಾಣ ಪ್ರತಿಷ್ಠಾದಲ್ಲಿ ಪಾಲ್ಗೊಳ್ಳುವ ಮೊದಲು ಪ್ರಧಾನಿಯವರು ಕಟ್ಟುನಿಟ್ಟಾದ ಧಾರ್ಮಿಕ ವ್ರತಾಚರಣೆ ಮಾಡಿದ್ದಾರೆ. ಅವರನ್ನು ನಾನು ಬಹಳ ಸಮಯದಿಂದ ಬಲ್ಲೆ. ಅವರೊಬ್ಬ ತಪಸ್ವಿ,’’ ಎಂದು ಭಾಗವತ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು 11 ದಿನಗಳ ವಿಶೇಷ ಧಾರ್ಮಿಕ ವ್ರತಾಚರಣೆ ಮಾಡಿದ್ದು, ಈ ಸಮಯದಲ್ಲಿ ಅವರು ತೆಂಗಿನ ನೀರನ್ನು ಮಾತ್ರ ಕುಡಿದಿದ್ದಾರೆ ಮತ್ತು ನೆಲದ ಮೇಲೆ ಕಂಬಳಿ ಮೇಲೆ ಮಲಗುವುದು ಸೇರಿದಂತೆ ಹಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿದ್ದಾರೆ.

ಭಗವಾನ್ ರಾಮನೊಂದಿಗೆ ಸಂಪರ್ಕ ಹೊಂದಿರುವ ದೇಶದ ಹಲವು ದೇವಾಲಯಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.

"ಪ್ರಧಾನಿ ಮೋದಿ ಒಬ್ಬರೇ ಕಠಿಣ ಧಾರ್ಮಿಕ ಆಚರಣೆ ಮಾಡುತ್ತಿದ್ದಾರೆ. ಪ್ರಧಾನಿ ಒಬ್ಬರೇ ತಪಸ್ಸು ಮಾಡಿದ್ದಾರೆ. ಈಗ ನಾವೆಲ್ಲರೂ ತಪ್ಪು ಮಾಡಬೇಕಾಗಿದೆ ಎಂದು ಆರ್ ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.

SCROLL FOR NEXT