ದೇಶ

ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ, ಕೇವಲ ವಿಸ್ತರಣೆಯಷ್ಟೇ: ThinkEdu Conclave 2024 ರಲ್ಲಿ ತಜ್ಞರ ಅಭಿಮತ

Srinivas Rao BV

ಚೆನ್ನೈ: ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ ಕೇವಲ ವಿಸ್ತರಣೆಯಷ್ಟೇ ಎಂದು ಥಿಂಕ್ ಎಡು ಕಾನ್ಕ್ಲೇವ್ 2024 ರಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಚೆನ್ನೈ ನಲ್ಲಿ ಶಾಸ್ತ್ರ ವಿಶ್ವವಿದ್ಯಾಲಯ ಪ್ರಾಯೋಜಿತ 13 ನೇ ಆವೃತ್ತಿಯ ಥಿಂಕ್ ಎಡು ಕಾನ್ಕ್ಲೇವ್ 2024 ರಲ್ಲಿ "AI ಸವಾಲು: ಯುವ ಭಾರತ ಸಿದ್ಧವಾಗಿದೆಯೇ?" ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ತಜ್ಞ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅನಿಲ್ ಸಹಸ್ರಬುಧೆ ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆಯ (AI) ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದರು. ಸಹಸ್ರಬುಧೆ ಸರಿಯಾದ ದೃಷ್ಟಿಕೋನದಿಂದ AI ಯ ಪರಿಣಾಮಕಾರಿ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. 

ಸಂಡೇ ಸ್ಟಾಂಡರ್ಡ್ ನ ಸಲಹಾ ಸಂಪಾದಕ ರವಿ ಶಂಕರ್ ನೇತೃತ್ವದಲ್ಲಿ ನಡೆದ ಸೆಷನ್ ನ ಮೊದಲ ದಿನ ಕೃತಕ ಬುದ್ಧಿಮತ್ತೆಯ ಸಂಭಾವ್ಯ ಪ್ರಯೋಜನಗಳು, ವ್ಯಾಪಕ ಬಳಕೆಯೊಂದಿಗೆ ಇರಬೇಕಾದ ನೈತಿಕ ಪರಿಗಣನೆಗಳ ಮುಖ್ಯಾಂಶಗಳೊಂದಿಗೆ ವಿವಿಧ ಆಯಾಮಗಳನ್ನು ಅನ್ವೇಷಿಸಲಾಯಿತು.

ಎರಡು ದಿನಗಳ ಸಮಾವೇಶದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಸಹಸ್ರಬುಧೆ, ಎಐ ಅಪಾರ ಪ್ರಮಾಣದ ಡೇಟಾ ಮತ್ತು ಮಾಹಿತಿಯನ್ನು ಹೊಂದಿದ್ದರೂ, ಅದರ ಪರಿಣಾಮಕಾರಿತ್ವವು ಸೀಮಿತವಾಗಿದೆ ಎಂದು ತಿಳಿಸಿದರು.

"AI ಸಾಕಷ್ಟು ಡೇಟಾ ಮತ್ತು ಮಾಹಿತಿಯನ್ನು ಹೊಂದಿದ್ದರೂ ಸಹ, "ವಿವೇಚನಾಶೀಲ ಪರಿಣಾಮ" ಅಥವಾ 'ಗ್ಯಾನ್' ಮತ್ತು 'ಪ್ರಜ್ಞಾನ್' ಎಂಬ ಮಾನವ ಲಕ್ಷಣವಿಲ್ಲದೆ, ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ," ಅವರು ಹೇಳಿದರು.

ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಅಮರ್ ಪಟ್ನಾಯಕ್ ಸಹಸ್ರಬುಧೆ ಅವರ ದೃಷ್ಟಿಕೋನವನ್ನು ಬೆಂಬಲಿಸಿದರು. “AI ವ್ಯವಸ್ಥೆಗಳು ಸಾಧನ ತರ್ಕಬದ್ಧತೆ ಮತ್ತು ಯಾಂತ್ರಿಕ ತರ್ಕಬದ್ಧತೆಯನ್ನು ಸಾಧ್ಯವಾದಷ್ಟು ನಿರ್ಮಿಸುತ್ತಿವೆ. ಆದ್ದರಿಂದ ಮಾನವರು ಬಹುಶಃ ತರ್ಕಬದ್ಧ ಪರಿಭಾಷೆಯಲ್ಲಿ ಯೋಚಿಸಲು ಸಾಧ್ಯವಾಗದ್ದನ್ನು ಈ AI ಅಲ್ಗಾರಿದಮ್‌ಗಳು ಅಭಿವೃದ್ಧಿಪಡಿಸಬಹುದು, ಆದರೆ ಅವು ಭಾವನಾತ್ಮಕ ವೈಚಾರಿಕತೆ ಅಥವಾ ಭಾವನಾತ್ಮಕ ವಿಷಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

SCROLL FOR NEXT