ವಿಶೇಷ ಡೂಡಲ್ ರಚಿಸಿರುವ ಗೂಗಲ್. 
ದೇಶ

75ನೇ ಗಣರಾಜ್ಯೋತ್ಸವ: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ದೇಶದಾದ್ಯತ 75 ನೇ ಗಣರಾಜ್ಯೋತ್ಸ ಸಂಭ್ರಮ ಮನೆ ಮಾಡಿದ್ದು, ಈ ನಡುವಲ್ಲೇ ವಿಶೇಷ ಡೂಡಲ್‌ ಮೂಲಕ ಗೂಗಲ್ ಶುಭ ಕೋರಿದೆ.

ನವದೆಹಲಿ: ದೇಶದಾದ್ಯತ 75ನೇ ಗಣರಾಜ್ಯೋತ್ಸ ಸಂಭ್ರಮ ಮನೆ ಮಾಡಿದ್ದು, ಈ ನಡುವಲ್ಲೇ ವಿಶೇಷ ಡೂಡಲ್‌ ಮೂಲಕ ಗೂಗಲ್ ಶುಭ ಕೋರಿದೆ.

ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಗೂಗಲ್ ಹಂಚಿಕೊಂಡಿದೆ.

ಕಾಲ ಕಳೆದಂತೆ ಕಪ್ಪು–ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್‌ ಬರೆದುಕೊಂಡಿದೆ.

‘ಈ ಡೂಡಲ್ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ’ ಎನ್ನುವ ಮಾಹಿತಿಯನ್ನು ಡೂಡಲ್‌ನಲ್ಲಿ ವಿವರಿಸಿದೆ.

ಇದರೊಂದಿಗೆ ಗೂಗಲ್‌ ಐತಿಹಾಸಿಕ ದಿನ ಮಹತ್ವ ಹಾಗೂ ಈ ಡೂಡಲ್‌ ರಚಿಸಿದ ಕಲಾವಿದರ ಬಗ್ಗೆಯೂ ವಿವರಿಸಿದೆ.

ಕಳೆದ ವರ್ಷ ಕೂಡ ಗೂಗಲ್‌ ಡೂಡಲ್‌ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್‌, ಪರೇಡ್‌ನ ದ್ರಶ್ಯವನ್ನು ಡೂಡಲ್‌ನಲ್ಲಿ ಸೇರಿಸಲಾಗಿತ್ತು.

ಗೂಗಲ್‌ ಡೂಡಲ್‌ ಇಂತಹ ವಿಶೇಷ ಸಂದರ್ಭದಲ್ಲಿ ಗೌರವ ಸಲ್ಲಿಸುವ ಉದ್ದೇಶದಿಂದ ಡೂಡಲ್‌ಗಳನ್ನು ರಚಿಸಿ ಪ್ರಕಟಿಸುತ್ತದೆ. ಇದು ಪ್ರಮುಖ ದಿನಗಳು, ಹಬ್ಬಗಳು ಮತ್ತು ಪ್ರಸಿದ್ಧ ಕಲಾವಿದರು, ಪ್ರವರ್ತಕರು ಮತ್ತು ವಿಜ್ಞಾನಿಗಳ ಜೀವನವನ್ನು ಸ್ಮರಿಸುವ ಗುರಿಯನ್ನು ಹೊಂದಿದೆ.

ಈ ಬಾರಿ ಭಾರತದಲ್ಲಿ ನಡೆಯುತ್ತಿರುವ 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್