ಬಿಹಾರ ಸಿಎಂ ನಿತೀಶ್ ಕುಮಾರ್ 
ದೇಶ

'ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳುತ್ತೇವೆ': ನಿತೀಶ್ ನಡೆ ಕುರಿತು ಬಿಹಾರ ಬಿಜೆಪಿ ನಾಯಕರ ಹೇಳಿಕೆ

ನಿತೀಶ್ ಕುಮಾರ್ ಪಕ್ಷದ ಜೊತೆಗಿನ ಮೈತ್ರಿ ಕುರಿತು ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಬಿಹಾರ ಬಿಜೆಪಿ ನಾಯಕರು ಹೇಳಿದ್ದಾರೆ.

ಪಾಟ್ನಾ: ನಿತೀಶ್ ಕುಮಾರ್ ಪಕ್ಷದ ಜೊತೆಗಿನ ಮೈತ್ರಿ ಕುರಿತು ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಬಿಹಾರ ಬಿಜೆಪಿ ನಾಯಕರು ಹೇಳಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಡಳಿತಾರೂಢ 'ಮಹಾಘಟಬಂಧನ್'ನಿಂದ ಹಿಂದೆ ಸರಿದು ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎಗೆ ಮರಳಬಹುದು ಎಂಬ ಊಹಾಪೋಹಗಳ ನಡುವೆಯೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಶುಕ್ರವಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಜೊತೆಗಿನ ಮೈತ್ರಿ ಕುರಿತು ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅದಕ್ಕೆ ಬದ್ಧರಾಗಿರುತ್ತೇವೆ. ಜೆಡಿಯು ಜೊತೆಗಿನ ಮೈತ್ರಿ ಕುರಿತು ಕೇಂದ್ರ ನಾಯಕತ್ವ ನಿರ್ಧರಿಸುತ್ತದೆ ಎಂದು ಹೇಳಿದರು. 

"ನಮ್ಮ ಕೇಂದ್ರ ನಾಯಕತ್ವವು ಬಿಹಾರದ ರಾಜಕೀಯ ಪರಿಸ್ಥಿತಿಯನ್ನು ಗಮನಿಸುತ್ತಿದೆ. ನಮ್ಮ ಕೇಂದ್ರ ನಾಯಕತ್ವವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಇಲ್ಲಿನ ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

ಆದರೆ, ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಶನಿವಾರ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದೆ ಎಂಬ ಸುದ್ದಿ ಕುರಿತು ಮಾತನಾಡಿದು ಅವರು, ನಾವು ನಾಳೆ ನಮ್ಮ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿಲ್ಲ" ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿತಾಯಕ್ಕೆ ಸರ್ಕಾರ ಮುಂದು; ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತ?

ಅಧಿಕಾರ ಹಸ್ತಾಂತರ ಗೊಂದಲ, ನಾಯಕರ ಹೇಳಿಕೆಗಳು: ವಿದೇಶಕ್ಕೆ ಹಾರಿದ ಸಿದ್ದು ಬಣದ 11 ಮಂದಿ 'ಕೈ' ಶಾಸಕರು

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ!

ಕಾಂಗ್ರೆಸ್ ಭವನಕ್ಕಾಗಿ ಸರ್ಕಾರಿ ಭೂಮಿ ಗುಳುಂ: ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಹೇಗೆ ಲಭ್ಯವಾಯಿತು? ಸರ್ಕಾರದ ವಿರುದ್ಧ BJP ಗಂಭೀರ ಆರೋಪ

SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ, 16 ಲಕ್ಷ ವಿದ್ಯಾರ್ಥಿಗಳು ನೋಂದಣಿ

SCROLL FOR NEXT