ಘಟನಾ ಸ್ಥಳ 
ದೇಶ

ಉತ್ತರಪ್ರದೇಶ: ಫರೀದ್‌ಪುರದಲ್ಲಿ ಅಗ್ನಿ ಅವಘಡ: ಸುಟ್ಟ ಸ್ಥಿತಿಯಲ್ಲಿ ದಂಪತಿ, ಮೂವರು ಮಕ್ಕಳ ಮೃತದೇಹ ಪತ್ತೆ!

ಉತ್ತರ ಪ್ರದೇಶದ ಫರೀದ್‌ಪುರದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಬರೇಲಿ: ಉತ್ತರ ಪ್ರದೇಶದ ಫರೀದ್‌ಪುರದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ಹೊಡೆದು ನೋಡಿದಾಗ ಐವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸುಶೀಲ್ ಚಂದ್ರ ಧುಲೆ ಹೇಳಿದರು.

ಮೃತರನ್ನು ಅಜಯ್ ಗುಪ್ತಾ (38), ಅವರ ಪತ್ನಿ ಅನಿತಾ (36), ಅವರ ಮಕ್ಕಳಾದ ದಿವ್ಯಾಂಶ್ (9) ಮತ್ತು ದಕ್ಷ್ (3) ಮತ್ತು ಮಗಳು ದಿವ್ಯಾಂಕ (6) ಎಂದು ಗುರುತಿಸಲಾಗಿದೆ.

ವಿವರವಾದ ತನಿಖೆ ನಡೆಯುತ್ತಿದೆ. ಬೆಂಕಿ ಹೇಗೆ ಸಂಭವಿಸಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದು, ಶವಸಂಸ್ಕಾರದ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!

Video: ಮಿಲ್ಕ್ ಟ್ಯಾಂಕರ್ ಪಲ್ಟಿ; ಹೆದ್ದಾರಿಯಲ್ಲಿ ಹಾಲಿನ ಹೊಳೆ, ಕ್ಯಾನ್​ ಹಿಡಿದು ಮುಗಿಬಿದ್ದ ಜನ!

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ- ರಾಹುಲ್ ಗಾಂಧಿ