ಸಮಾಜವಾದಿ ಪಕ್ಷ 
ದೇಶ

ಲೋಕಸಭೆ ಚುನಾವಣೆಗೆ SP ಮೊದಲ ಪಟ್ಟಿ; ಡಿಂಪಲ್ ಯಾದವ್ ಸೇರಿದಂತೆ 16 ಅಭ್ಯರ್ಥಿಗಳ ಹೆಸರು ಪ್ರಕಟ

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಪಿ 16 ಅಭ್ಯರ್ಥಿಗಳನ್ನು ಘೋಷಿಸಿದ್ದು ಯಾದವ್ ಕುಟುಂಬದ ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್ ಹೆಸರು ಕೂಡ ಪಟ್ಟಿಯಲ್ಲಿದೆ.

ಲಖನೌ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಪಿ 16 ಅಭ್ಯರ್ಥಿಗಳನ್ನು ಘೋಷಿಸಿದ್ದು ಯಾದವ್ ಕುಟುಂಬದ ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್ ಹೆಸರು ಕೂಡ ಪಟ್ಟಿಯಲ್ಲಿದೆ. 

ಇದುವರೆಗೂ ಬಿಜೆಪಿ ಸೇರಿದಂತೆ ಯಾರೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಂಭಾಲ್‌ನಿಂದ ಶಫೀಕರ್ ರೆಹಮಾನ್ ಬುರ್ಕೆ ಮತ್ತೆ ಕಣಕ್ಕಿಳಿದಿದ್ದಾರೆ. ಫಿರೋಜಾಬಾದ್‌ನಿಂದ ಅಕ್ಷಯ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ಇಟಾಹ್‌ನಿಂದ ದೇವೇಶ್ ಯಾದವ್, ಬದೌನ್‌ನಿಂದ ಧರ್ಮೇಂದ್ರ ಯಾದವ್, ಖೇರಿಯಿಂದ ಉತ್ಕರ್ಷ್ ವರ್ಮಾ, ಧೌರಾಹರಾದಿಂದ ಆನಂದ್ ಭದೌರಿಯಾ, ಉನ್ನಾವೊದಿಂದ ಶ್ರೀಮತಿ ಅಣ್ಣು ಟಂಡನ್ ಕಣಕ್ಕಿಳಿದಿದ್ದಾರೆ.

ಇದಲ್ಲದೆ, ಲಖನೌದಿಂದ ರವಿದಾಸ್ ಮೆಹ್ರೋತ್ರಾ ಮತ್ತು ಫರೂಕಾಬಾದ್‌ನಿಂದ ಡಾ. ನವಲ್ ಕಿಶೋರ್ ಶಾಕ್ಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಅಕ್ಬರ್‌ಪುರದಿಂದ ರಾಜರಾಮ್ ಪಾಲ್, ಬಂದಾದಿಂದ ಶಿವಶಂಕರ್ ಸಿಂಗ್ ಪಟೇಲ್, ಫೈಜಾಬಾದ್‌ನಿಂದ ಅವಧೇಶ್ ಪ್ರಸಾದ್, ಅಂಬೇಡ್ಕರ್ ನಗರದಿಂದ ಲಾಲ್ಜಿ ವರ್ಮಾ, ಬಸ್ತಿಯಿಂದ ರಾಮಪ್ರಸಾದ್ ಚೌಧರಿ ಮತ್ತು ಗೋರಖ್‌ಪುರದಿಂದ ಕಾಜಲ್ ನಿಶಾದ್ ಅವರನ್ನು ಕಣಕ್ಕಿಳಿಸಲಾಗಿದೆ. ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಎಸ್‌ಪಿ ಪಟ್ಟಿ ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ಮೈತ್ರಿಯೊಂದಿಗೆ ಸ್ಪರ್ಧಿಸಲು ಎಸ್‌ಪಿ ನಿರ್ಧರಿಸಿದೆ. ಉತ್ತರಪ್ರದೇಶದ 80ರಲ್ಲಿ 60 ಸ್ಥಾನಗಳಲ್ಲಿ ಸ್ಪರ್ಧಿಸಲು ಎಸ್‌ಪಿ ನಿರ್ಧರಿಸಿದೆ. ಜಯಂತ್ ಚೌಧರಿ ಅವರ ಆರ್‌ಎಲ್‌ಡಿಗೆ ಏಳು ಸ್ಥಾನಗಳನ್ನು ನೀಡಲಾಗಿದೆ. ಎಸ್‌ಪಿ 11 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದೆ. ಆದರೆ, ಕಾಂಗ್ರೆಸ್ ಈ ಸ್ಥಾನಗಳನ್ನು ನಿರಾಕರಿಸಿಲ್ಲ ಅಥವಾ ಯಾವುದೇ ಮೈತ್ರಿ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಹೀಗಿರುವಾಗ ಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿ ಬಗ್ಗೆ ಗೊಂದಲ ಉಂಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT