ಬ್ರೇಕ್ ಫೇಲ್ಯೂರ್ ಆದ ಬಸ್ 
ದೇಶ

ಅಮರನಾಥ Bus Brake Fail: ಚಲಿಸುತ್ತಿದ್ದ ಬಸ್ ನಿಂದಲೇ ಜಿಗಿದ ಯಾತ್ರಾರ್ಥಿಗಳು, ಪ್ರಾಣ ಉಳಿಸಿದ ಸೈನಿಕರು!

ಪವಿತ್ರ ಅಮರನಾಥ್ ಯಾತ್ರೆಯಿಂದ ಹಿಂದಿರುಗವಾಗ ಬಸ್ ನ ಬ್ರೇಕ್ ಫೇಲ್ಯೂರ್ ಆದ ಪರಿಣಾಮ ಬಸ್ ನೊಳಗಿದ್ದ ಯಾತ್ರಾರ್ಥಿಗಳು ಚಲಿಸುತ್ತಿದ್ದ ಬಸ್ ನಿಂದಲೇ ಕೆಳಗೆ ಜಿಗಿದಿರುವ ಘಟನೆ ವರದಿಯಾಗಿದೆ.

ಕಟ್ರಾ: ಪವಿತ್ರ ಅಮರನಾಥ್ ಯಾತ್ರೆಯಿಂದ ಹಿಂದಿರುಗವಾಗ ಬಸ್ ನ ಬ್ರೇಕ್ ಫೇಲ್ಯೂರ್ ಆದ ಪರಿಣಾಮ ಬಸ್ ನೊಳಗಿದ್ದ ಯಾತ್ರಾರ್ಥಿಗಳು ಚಲಿಸುತ್ತಿದ್ದ ಬಸ್ ನಿಂದಲೇ ಕೆಳಗೆ ಜಿಗಿದಿರುವ ಘಟನೆ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಅಮರನಾಥ ಯಾತ್ರೆ ಮುಗಿಸಿ ಪಂಜಾಬ್​ನ ಹೋಶಿಯಾರ್​ಪುರಕ್ಕೆ ಹಿಂದಿರುಗುತ್ತಿರುವಾಗ ಬಸ್​ನ ಬ್ರೇಕ್​ ಫೇಲ್​ ಆದ ಪರಿಣಾಮ ಯಾತ್ರಿಕರು ಬಸ್​ನಿಂದ ಹಾರಿ ಗಾಯಗೊಂಡಿದ್ದಾರೆ.

ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಹಿಂತಿರುಗುತ್ತಿದ್ದ ಸುಮಾರು 44 ಯಾತ್ರಾರ್ಥಿಗಳನ್ನು ಹೊತ್ತಿದ್ದ ಬಸ್, ಬ್ರೇಕ್ ವೈಫಲ್ಯದಿಂದಾಗಿ ಬನಿಹಾಲ್ ಬಳಿಯ ನಚ್ಲಾನಾದಲ್ಲಿ ನಿಲ್ಲಿಸಲು ವಿಫಲವಾಗಿತ್ತು.

ಚಲಿಸುತ್ತಿದ್ದ ಬಸ್​ನಿಂದ ಹತ್ತು ಮಂದಿ ಕೆಳಗೆ ಹಾರಿರುವ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ, ಅದರಲ್ಲಿ ಮೂವರು ಮಹಿಳೆಯರು ಒಂದು ಮಗು ಕೂಡ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಹಿಂದೆ ಸ್ಥಳೀಯರು, ಸೈನಿಕರು ಮತ್ತು ಪೊಲೀಸರು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಬಸ್ ನಿಲ್ಲಿಸಿ ಜನರ ಪ್ರಾಣ ಉಳಿಸಿದ ಭಾರತೀಯ ಸೇನೆ ಸೈನಿಕರು

ಇನ್ನು ಚಲಿಸುತ್ತಿದ್ದ ವಾಹನದಿಂದ ಯಾತ್ರಾರ್ಥಿಗಳು ಜಿಗಿಯುತ್ತಿರುವುದನ್ನು ಗಮನಿಸಿದ ಸೇನಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಬಸ್‌ನ ಟೈರ್‌ಗಳ ಕೆಳಗೆ ಕಲ್ಲುಗಳನ್ನು ಇಟ್ಟು ಬಸ್ ನದಿಗೆ ಬೀಳದಂತೆ ತಡೆದಿದ್ದಾರೆ.

ಅಲ್ಲದೆ ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆ ಮೂಲಕ ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ಸಂಭಾವ್ಯ ಅಪಘಾತವನ್ನು ಸೈನಿಕರು ತಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ