ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ಬಳಿ ರಾಷ್ಟ್ರೀಯ ಹೆದ್ದಾರಿಯು ಭೂಕುಸಿತದಿಂದ ನಿರ್ಬಂಧವಾಗಿದೆ 
ದೇಶ

ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ: ಬಂಡೆ ಬಿದ್ದು ಹೈದರಾಬಾದ್ ಮೂಲದ ಇಬ್ಬರು ಪ್ರವಾಸಿಗರು ಸಾವು

ನಿರ್ಮಲ್ ಶಾಹಿ (36ವ) ಮತ್ತು ಸತ್ಯ ನಾರಾಯಣ (50ವ) ಅವರು ಬೈಕ್ ನಲ್ಲಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಬೆಟ್ಟದಿಂದ ಉರುಳುತ್ತಿದ್ದ ಬಂಡೆಗಳ ಇಬ್ಬರ ಮೇಲೆ ಬಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶನಿವಾರ ಭೂಕುಸಿತದಿಂದಾಗಿ ಬಂಡೆಗಳು ಬಿದ್ದು ಹೈದರಾಬಾದ್‌ನ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ.

ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಚಾರ್ ಮತ್ತು ಕರ್ಣಪ್ರಯಾಗ ನಡುವಿನ ಚಟ್ವಾಪೀಪಾಲ್ ಬಳಿ ದುರ್ಘಟನೆ ಸಂಭವಿಸಿದೆ. ನಿರ್ಮಲ್ ಶಾಹಿ (36ವ) ಮತ್ತು ಸತ್ಯ ನಾರಾಯಣ (50ವ) ಅವರು ಬೈಕ್ ನಲ್ಲಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಬೆಟ್ಟದಿಂದ ಉರುಳುತ್ತಿದ್ದ ಬಂಡೆ ಇಬ್ಬರ ಮೇಲೆ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ, ಭೂಕುಸಿತದ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗಿದೆ.

ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಗೌಚಾರ್ ಮತ್ತು ರುದ್ರಪ್ರಯಾಗದ ನಡುವಿನ ಕಾಮೆಡ, ಪಿಪ್ಪಲಕೋಟಿ ಬಳಿಯ ಭನೀರ್ ಪಾಣಿ, ತಂಗಣಿ ಬಳಿಯ ಪಗಲ್ನಾಳ, ಜೋಶಿಮಠ ಮತ್ತು ಬದರಿನಾಥ್ ನಡುವೆ ಪಿನೋಲಾ, ಕಾಂಚಾಂಗ, ಹನುಮನಚಟ್ಟಿ ಸೇರಿದಂತೆ ಅರ್ಧ ಡಜನ್‌ಗೂ ಹೆಚ್ಚು ಸ್ಥಳಗಳಲ್ಲಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗಡಿ ರಸ್ತೆಗಳ ಸಂಸ್ಥೆ ಸಿಬ್ಬಂದಿ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭೂಕುಸಿತದಿಂದಾಗಿ ರುದ್ರಪ್ರಯಾಗ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯೂ ಬಂದ್ ಆಗಿದೆ.

ಇಂದು ಮತ್ತು ನಾಳೆ ಭಾನುವಾರದಂದು ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳೆರಡಕ್ಕೂ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!