ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ Kind courtesy Reliance Industries Limited 
ದೇಶ

ರಾಧಿಕಾ ಮರ್ಚೆಂಟ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ

29 ವರ್ಷದ ಅನಂತ್ ಅಂಬಾನಿ ಅವರು, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರೊಂದಿಗೆ ವಿವಾಹವಾದರು.

ಮುಂಬೈ: ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇಂದು ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ 29 ವರ್ಷದ ಅನಂತ್ ಅಂಬಾನಿ ಅವರು, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರೊಂದಿಗೆ ವಿವಾಹವಾದರು.

ಈ ಅದ್ಧೂರಿ ಮದುವೆಯಲ್ಲಿ ಜಗತ್ತಿನ ಅತಿ ಜನಪ್ರಿಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಹಾಲಿವುಡ್​ ಸೆಲೆಬ್ರಿಟಿಗಳು, ಬಾಲಿವುಡ್​ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿಯಾದರು.

ಅಂಬಾನಿ ಕುಟುಂಬ

ಬಾಲಿವುಡ್​ ಸೆಲೆಬ್ರಿಟಿಗಳಾದ ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಗೌರಿ ಖಾನ್​, ಆರ್ಯನ್​ ಖಾನ್​, ಸುಹಾನಾ ಖಾನ್​, ವಿಕ್ಕಿ ಕೌಶಲ್, ಕತ್ರಿನಾ ಕೈಫ್​, ಸಂಜಯ್​ ದತ್​, ಜೆನಿಲಿಯಾ ದೇಶಮುಖ್​, ರಿತೇಶ್​ ದೇಶಮುಖ್​, ಸಿದ್ದಾರ್ಥ್​ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಆಲಿಯಾ ಭಟ್​, ರಣಬೀರ್​ ಕಪೂರ್​ ಸೇರಿದಂತೆ ಅನೇಕರು ಅನಂತ್ ಅಂಬಾನಿ ಅವರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಈ ವೈಭವೋಪೇತ ಮದುವೆ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಜುಲೈ 12ರಂದು ವಿವಾಹ ಮಹೋತ್ಸವ, ಜುಲೈ 13ರಂದು 'ಶುಭ್ ಆಶೀರ್ವಾದ್' ಎಂಬ ಮತ್ತೊಂದು ಕಾರ್ಯಕ್ರಮ ಹಾಗೂ ಜುಲೈ 14ರಂದು ಅಂತಿಮ ಸುತ್ತಿನ 'ಮಂಗಲ್ ಉತ್ಸವ್'(ಆರತಕ್ಷತೆ) ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಾಸಗಿ ಫೋನ್ ಕಂಪನಿಯ ಉದ್ಯೋಗಸ್ಥರು ವಾರ್ಷಿಕ ಸಭೆಗೆಂದು ವಿಯೆಟ್ನಾಂಗೆ ತೆರಳಿದ್ದಾಗ ದುರಂತ: ಪ್ರಧಾನಿ ಮೋದಿ ಸಂತಾಪ

ಬಾಗಲಕೋಟೆ: ಕಬ್ಬಿನ ಗದ್ದೆಯಲ್ಲಿ ಮಹಿಳೆ ಶವವಾಗಿ ಪತ್ತೆ! ಅಕ್ರಮ ಸಂಬಂಧಕ್ಕೆ ಬಲಿಯಾದ್ಲಾ ವಿವಾಹಿತೆ?

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್