ನವದೆಹಲಿ: ಒಮಾನ್ ಕರಾವಳಿಯಲ್ಲಿ ಭಾನುವಾರ ಮುಳುಗಿದ ಎಂಟಿ ಫಾಲ್ಕನ್ ಪ್ರೆಸ್ಟೀಜ್ ತೈಲ ಪೂರೈಕೆ ಹಡಗಿನಿಂದ ಒಂಬತ್ತು ಸಿಬ್ಬಂದಿ - ಎಂಟು ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರನ್ನು ರಕ್ಷಿಸಲಾಗಿದೆ.
ಹಡಗಿನಲ್ಲಿ 13 ಭಾರತೀಯರು ಸೇರಿದಂತೆ ಒಟ್ಟು 16 ಸಿಬ್ಬಂದಿ ಇದ್ದರು. ಉಳಿದ ಸಿಬ್ಬಂದಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಕ್ಷಿಸಲಾದ 9 ಸಿಬ್ಬಂದಿ ಮಸ್ಕತ್‌ನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡುಕ್ಮ್‌ನ ವಿಲಾಯತ್‌ನಲ್ಲಿ ಸೋಮವಾರ ಈ ಹಡಗು ಮಗುಚಿ ಬಿದ್ದಿದ್ದು, ಇದು ಕೊಮೊರೊಸ್ ದೇಶದ ಧ್ವಜ ಹೊಂದಿದೆ ಎಂದು ಒಮಾನ್ ಕಡಲ ಪ್ರಾಧಿಕಾರ ತಿಳಿಸಿದೆ.
ದುಬೈನ ಹಮ್ರಿಯಾ ಬಂದರಿನಿಂದ ಹೊರಟಿದ್ದ ಹಡಗು ಯೆಮೆನ್ ಬಂದರು ನಗರಿ ಏಡೆನ್‌ಗೆ ಹೋಗುತ್ತಿತ್ತು ಎಂದು ಶಿಪ್ಪಿಂಗ್ ವೆಬ್‌ಸೈಟ್ (marinetraffic.com)ನಲ್ಲಿ ಉಲ್ಲೇಖಿಸಲಾಗಿದೆ. ಡುಕ್ಮ್ ಬಂದರು ಒಮಾನ್‌ನ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.