ಮೋಹನ್ ಭಾಗವತ್ 
ದೇಶ

ಕೆಲವರು ದೇವರಾಗಲು ಸೂಪರ್ ಮ್ಯಾನ್ ಆಗಲು ಬಯಸುತ್ತಾರೆ, ಆದರೆ ಅನಿಶ್ಚಿತತೆ ಬಗ್ಗೆ ಅರಿವಿಲ್ಲ: ಮೋಹನ್ ಭಾಗವತ್

ಜಾರ್ಖಂಡ್ ರಾಜ್ಯದ ಬಿಷ್ಣಾಪುರದಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮೋಹನ್ ಭಾಗವತ್ ಅವರು ಭಾಷಣ ಮಾಡಿದರು.

ನವದೆಹಲಿ: ಕೆಲವರು ಸೂಪರ್‌ಮ್ಯಾನ್ ಆಗಲು ಬಯಸುತ್ತಾರೆ, ನಂತರ ದೇವರಾಗಲು ಬಯಸುತ್ತಾರೆ, ಆದರೆ ಮುಂದಿನ ಅನಿಸ್ಚಿತತೆಗಳಬಗ್ಗೆ ಅವರಿಗೆ ಅರಿವು ಇರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಜಾರ್ಖಂಡ್ ರಾಜ್ಯದ ಬಿಷ್ಣಾಪುರದಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮೋಹನ್ ಭಾಗವತ್ ಅವರು ಭಾಷಣ ಮಾಡಿದರು. ಈ ವೇಳೆ ಕೆಲವು ಜನರು ಸೂಪರ್ ಮ್ಯಾನ್‌ಗಳಾಗಲು ಬಯಸುತ್ತಾರೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ಬಳಿಕ ಜನರು ದೇವರಾಗಲು ಬಯಸುತ್ತಾರೆ. ಆದರೆ ಭಗವಂತ ಹೇಳುತ್ತಾರೆ ತಾನು ವಿಶ್ವರೂಪ ಅಂತ. ಆದರೆ ವಿಶ್ವರೂಪಕ್ಕೂ ದೊಡ್ಡದು ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅಂತಿಮವಾಗಿ ಅಭಿವೃದ್ದಿಗೆ ಯಾವುದೇ ಕೊನೆ ಎಂಬುದೇ ಇಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಹೆಚ್ಚಿನದ್ದನ್ನು ಸಾಧಿಸಲು ದುಡಿಯಬೇಕು ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ಅವರು ಹೇಳಿರೋ ಈ ಮಾತು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಪಕ್ಷ ಇದು ದೆಹಲಿಯ 7 ಲೋಕಕಲ್ಯಾಣ್ ಮಾರ್ಗವನ್ನು ಗುರಿಯಾಗಿಸಿಕೊಂಡು ಭಾಗವತ್ ಹೇಳಿಕೆ ನೀಡಿದ್ದಾರೆ ಎಂದು ಹೇಳಿದೆ. ಭಾಗವತ್ ಅವರ ವಿಶ್ವರೂಪದ ಮಾತು ಪರೋಕ್ಷವಾಗಿ ಮೋದಿ ಅವರನ್ನೇ ಗುರಿಯಾಗಿಸಿಕೊಂಡಿರೋದು ಬಹಳ ಚರ್ಚೆಗೆ ಗುರಿಯಾಗಿದೆ. ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪರೋಕ್ಷ ದಾಳಿ ಎಂದು ಕಾಂಗ್ರೆಸ್ ಪರಿಗಣಿಸಿದೆ.

ಆಂತರಿಕ ಮತ್ತು ಬಾಹ್ಯ ಆತ್ಮದ ಬೆಳವಣಿಗೆ ಎಂದಿಗೂ ಅಂತ್ಯವಿಲ್ಲದ ಪ್ರಕ್ರಿಯೆಯಾಗಿದೆ. ಅದಕ್ಕಾಗಿಯೇ ಮಾನವೀಯತೆಗಾಗಿ ಪಟ್ಟುಬಿಡದೆ ಕೆಲಸ ಮಾಡಬೇಕು. ಒಬ್ಬ ಕೆಲಸಗಾರನು ತನ್ನ ಕೆಲಸದಿಂದ ಎಂದಿಗೂ ತೃಪ್ತನಾಗಬಾರದು ಎಂದು ಅವರು ಹೇಳಿದರು.

ಸನಾತನ ಧರ್ಮದ ಸಾರದ ಕುರಿತು ಮಾತನಾಡಿದ ಅವರು, “ಸನಾತನ ಸಂಸ್ಕೃತಿ ಮತ್ತು ಧರ್ಮವು ರಾಜಮನೆತನದಿಂದ ಬಂದಿಲ್ಲ ಆದರೆ ಆಶ್ರಮಗಳು ಮತ್ತು ಕಾಡುಗಳಿಂದ ಬಂದಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಉಡುಪುಗಳು ಬದಲಾಗಬಹುದು, ಆದರೆ ನಮ್ಮ ಸ್ವಭಾವವು ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT