ಲಡಾಖ್ 
ದೇಶ

ಕೇಂದ್ರ ಬಜೆಟ್ 2024: ಈ ಬಾರಿ ಲಡಾಖ್ ಗೆ ಶೇ. 32 ರಷ್ಟು ಹೆಚ್ಚು ಅನುದಾನ

ಬಜೆಟ್, ಕೃಷಿ ಮತ್ತು ಸಂಬಂಧಿತ ಯೋಜನೆಗಳು, ನೀರು ಸರಬರಾಜು ಮತ್ತು ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಅರಣ್ಯ ಮತ್ತು ವನ್ಯಜೀವಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಕೇಂದ್ರ ವಲಯದ ವೆಚ್ಚಗಳಿಗಾಗಿ ಲಡಾಖ್‌ಗೆ 3,922.51 ಕೋಟಿ ರೂ. ಅನುದಾನ ಹಂಚಿದೆ.

ನವದೆಹಲಿ: 2024-25ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ಕೇಂದ್ರವು 5,958 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಿದೆ. ಇದು ಕಳೆದ ವರ್ಷ ಹಂಚಿಕೆ ಮಾಡಲಾಗಿದ್ದ 4,500 ಕೋಟಿ ರೂ.ಗಳಿಂದ ಶೇ.32 ರಷ್ಟು ಹೆಚ್ಚಳವಾಗಿದೆ.

2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಕೇಂದ್ರಾಡಳಿತ ಪ್ರದೇಶ ತನ್ನ ಸಚಿವಾಲಯ ಸಂಬಂಧಿತ ವೆಚ್ಚಗಳು ಮತ್ತು ಇತರ ಇಲಾಖೆಗಳು ಮತ್ತು ಕಚೇರಿಗಳ ಸ್ಥಾಪನೆ ವೆಚ್ಚಕ್ಕಾಗಿ 2,035.49 ಕೋಟಿ ರೂಪಾಯಿ ಹಣ ಸ್ವೀಕರಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಬಜೆಟ್, ಕೃಷಿ ಮತ್ತು ಸಂಬಂಧಿತ ಯೋಜನೆಗಳು, ನೀರು ಸರಬರಾಜು ಮತ್ತು ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಅರಣ್ಯ ಮತ್ತು ವನ್ಯಜೀವಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಕೇಂದ್ರ ವಲಯದ ವೆಚ್ಚಗಳಿಗಾಗಿ ಲಡಾಖ್‌ಗೆ 3,922.51 ಕೋಟಿ ರೂ. ಅನುದಾನ ಹಂಚಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ!

SCROLL FOR NEXT