ನವದೆಹಲಿ: ಬಂಡವಾಳ ಲಾಭ ತೆರಿಗೆ (Capital gains ) ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ನಿರ್ದಿಷ್ಟ ಆರ್ಥಿಕ ಆಸ್ತಿಗಳ ಮೇಲಿನ ಬಂಡವಾಳ ಲಾಭ ತೆರಿಗೆ ವಿನಾಯಿತಿ ಮಿತಿಯನ್ನು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರಿಗೆ ವಾರ್ಷಿಕ 1.25 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ.
ತೆರಿಗೆ ದಾವೆಗಳನ್ನು ಕಡಿಮೆ ಮಾಡಲು, ಸರ್ಕಾರವು ವಿವಾದ್ ಸೇ ವಿಶ್ವಾಸ್ ಯೋಜನೆ 2024 ಅನ್ನು ಯೋಜಿಸುತ್ತಿದೆ ಎಂದು ಹಣಕಾಸು ಸಚಿವರು ಇದೇ ವೇಳೆ ಹೇಳಿದರು.
1 ಕೋಟಿ ನಗರ ಬಡವರು ಮತ್ತು ಮಧ್ಯಮ ವರ್ಗದ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ 2.0 ಗಾಗಿ 10 ಲಕ್ಷ ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 12 ಹೊಸ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.