ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭಾರತದ ಮಣಿಪುರ, ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸಬೇಡಿ: ಅಮೆರಿಕ ಪ್ರಜೆಗಳಿಗೆ ಸೂಚನೆ

ಭಾರತದ ಪರಿಷ್ಕೃತ ಪ್ರವಾಸ ಸಲಹೆಯಲ್ಲಿ ಈಶಾನ್ಯ ರಾಜ್ಯಗಳ ಮಾಹಿತಿಯನ್ನು ಪ್ರತಿಬಿಂಬಿಸಲು ಪರಿಷ್ಕರಿಸಲಾಗಿದೆ ಎಂದು ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

ಭದ್ರತಾ ಸಿಬ್ಬಂದಿ ಸಾಂದರ್ಭಿಕ ಚಿತ್ರ
Nagaraja AB
Updated On : 25 Jul 2024, 1:11 am

ನವದೆಹಲಿ: ನಕ್ಸಲೀಯರು ಸಕ್ರೀಯರಾಗಿರುವ ಭಾರತದ ಮಣಿಪುರ ಮತ್ತು ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಹೇಳಿದೆ. ಭಾರತದ ಪರಿಷ್ಕೃತ ಪ್ರವಾಸ ಸಲಹೆಯಲ್ಲಿ ಈಶಾನ್ಯ ರಾಜ್ಯಗಳ ಮಾಹಿತಿಯನ್ನು ಪ್ರತಿಬಿಂಬಿಸಲು ಪರಿಷ್ಕರಿಸಲಾಗಿದೆ ಎಂದು ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

ಅಪರಾಧ ಮತ್ತು ಭಯೋತ್ಪಾದನೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಪ್ರದೇಶಗಳು ಅಪಾಯವನ್ನು ಹೆಚ್ಚಿಸಿವೆ ಎಂದು ಅದು ಹೇಳಿದೆ. ಒಟ್ಟಾರೆ ಭಾರತವನ್ನು 2 ನೇ ಹಂತದಲ್ಲಿ ಇರಿಸಲಾಗಿದೆ. ಆದರೆ ದೇಶದ ಹಲವಾರು ಭಾಗಗಳನ್ನು 4 ನೇ ಹಂತದಲ್ಲಿ ಇರಿಸಲಾಗಿದೆ: ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕ್ ಗಡಿ, ಮಣಿಪುರ ಮತ್ತು ಮಧ್ಯ ಮತ್ತು ಪೂರ್ವ ಭಾರತದ ಭಾಗಗಳು ನಾಲ್ಕನೇ ಹಂತದಲ್ಲಿವೆ.

Also Read

ಪೂಂಚ್ ನಲ್ಲಿ ಭಯೋತ್ಪಾದಕರ ದಾಳಿ: ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರ ಶವ ಪತ್ತೆ

"ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯ ಕಾರಣದಿಂದ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ (ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ ಲೇಹ್ ಹೊರತುಪಡಿಸಿ) ಪ್ರಯಾಣಿಸಬೇಡಿ; ಸಶಸ್ತ್ರ ಸಂಘರ್ಷದ ಸಾಧ್ಯತೆಯಿಂದಾಗಿ ಭಾರತ-ಪಾಕಿಸ್ತಾನ ಗಡಿಯ 10 ಕಿಮೀ ಒಳಗೆ ಹಾಗೂ ಭಯೋತ್ಪಾದನೆಯಿಂದಾಗಿ ಕೇಂದ್ರ ಮತ್ತು ಪೂರ್ವ ಭಾರತದ ಭಾಗಗಳಿಗೆ ತೆರಳಬೇಡಿ, ಮಣಿಪುರದಲ್ಲಿ ಹಿಂಸಾಚಾರ ಮತ್ತು ಅಪರಾಧ ಕಾರಣ ಅಲ್ಲಿಗೆ ಪ್ರಯಾಣಿಸದಂತೆ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಸಲಹೆ ನೀಡಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement