ಕಾರ್ಗಿಲ್ ಯುದ್ಧ ಸ್ಮಾರಕ ಸ್ಥಳ  
ದೇಶ

25ನೇ ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಶೌರ್ಯ, ತ್ಯಾಗಗಳನ್ನು ಸ್ಮರಿಸಿಕೊಂಡ ಕುಟುಂಬಸ್ಥರು

ಕಾರ್ಗಿಲ್ ವಿಜಯ್ ದಿವಸ್ ನ್ನು ವಾರ್ಷಿಕವಾಗಿ ಜುಲೈ 26 ರಂದು ಆಚರಿಸಲಾಗುತ್ತದೆ, 1999 ರಲ್ಲಿ ಆಪರೇಷನ್ ವಿಜಯ್ ಯಶಸ್ಸನ್ನು ಸ್ಮರಿಸುತ್ತದೆ.

ನವದೆಹಲಿ: ದೇಶವು ಇಂದು ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಹುತಾತ್ಮ ಸೈನಿಕರ ಕುಟುಂಬಸ್ಥರು 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಪ್ರೀತಿಪಾತ್ರರ ಶೌರ್ಯ ಮತ್ತು ಸಮರ್ಪಣೆಯನ್ನು ನೆನಪಿಸಿಕೊಂಡಿದ್ದಾರೆ.

ಕಾರ್ಗಿಲ್ ವೀರಯೋಧ ವಿನೋದ್ ಕುಮಾರ್ ಅವರ ಪತ್ನಿ ಮಧುಬಾಲಾ ಮಾತನಾಡಿ, 1997 ಮೇ 18 ರಂದು ನಾವು ವಿವಾಹವಾದೆವು. ಜೂನ್ 14, 1999 ರಂದು ನನ್ನ ಪತಿ ಪ್ರಾಣ ಕಳೆದುಕೊಂಡರು. ನನ್ನ ಪತಿ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದರು.

ಕಾರ್ಗಿಲ್ ವೀರಯೋಧ ಬೇಜೇಂದರ್ ಕುಮಾರ್ ಅವರ ಅಣ್ಣ ರಾಜೇಂದರ್ ಕುಮಾರ್, ನನ್ನ ಸಹೋದರ ದೇಶಕ್ಕಾಗಿ ಮಡಿದಿರುವುದು ಹೆಮ್ಮೆಯಾಗುತ್ತಿದೆ; ಅವರು ದೇಶಕ್ಕಾಗಿ ಮಡಿದರು. ನಾವು ಪ್ರತಿದಿನ ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದರು.

ಕಾರ್ಗಿಲ್ ವೀರ, ಗ್ರೂಪ್ ಕ್ಯಾಪ್ಟನ್ ಕೆ ನಚಿಕೇತ ರಾವ್ ಅವರ ಪತ್ನಿ ಪ್ರಶಾಂತಿ ಅವರು, ಇತರ ಎಲ್ಲ ದೇಶವಾಸಿಗಳಂತೆ. ಪಾಕಿಸ್ತಾನದಿಂದ ವಾಪಸಾತಿಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ ಎಂದರು. ಕೆ ನಚಿಕೇತ ರಾವ್ ಅವರು ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿದ್ದು, ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೊದಲು ಪಾಕಿಸ್ತಾನಿ ಪಡೆಗಳು ವಶಪಡಿಸಿಕೊಂಡಿದ್ದವು.

ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಅವರು ತೋರಿದ ಶೌರ್ಯ ಮತ್ತು ಧೈರ್ಯ ಅನುಕರಣೀಯ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾವು ಮದುವೆಯಾಗಿರಲಿಲ್ಲ. ಅದರ ಎರಡು ವರ್ಷಗಳ ನಂತರ ನಾವು ಮದುವೆಯಾದೆವು. ಎಲ್ಲಾ ಇತರ ದೇಶವಾಸಿಗಳಂತೆ, ನಾವು ಅವರ ವಾಪಸಾತಿಗೆ ಪ್ರತಿದಿನ ಪ್ರಾರ್ಥಿಸುತ್ತಿದ್ದೆವು. ದೇಶಕ್ಕಾಗಿ ಶೌರ್ಯವನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದ ಕೆಲವರಲ್ಲಿ ನನ್ನ ಪತಿ ಇದ್ದದ್ದು ಹೆಮ್ಮೆಯ ವಿಷಯ ಎಂದರು.

ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಮೇಜರ್ (ಗೌರವ ಕ್ಯಾಪ್ಟನ್) ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ), ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಬಗ್ಗೆ ರಾಷ್ಟ್ರದ ಜನತೆ ಹೆಮ್ಮೆ ಪಡುತ್ತಾರೆ ನಾವು ಆ ವೀರ ಯೋಧರಿಗೆ ನಮನ ಸಲ್ಲಿಸಲು ದ್ರಾಸ್‌ನಲ್ಲಿರುವ ಸ್ಮಾರಕದಲ್ಲಿ ಸಭೆ ಸೇರಿದ್ದೇವೆ ಎಂದರು.

ಸುಬೇದಾರ್ ಮೇಜರ್ ಆರ್.ಟಿ.ರೈಸ್ ಅಹಮದ್, 1997ರಲ್ಲಿ ಭಾರತೀಯ ಸೇನೆಯಲ್ಲಿ ತೊಡಗಿಸಿಕೊಂಡಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರನ್ನು ಸ್ಮರಿಸಿದ್ದಾರೆ.

ಹಿರಿಯ ಚೀಫ್ ಪೆಟಿ ಆಫೀಸರ್ ರೇಡಿಯೋ IND ನೇವಿ ಅನಂತ ಜೋಶಿ, ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವವು ನಮಗೆ ಬಹಳ ಮುಖ್ಯವಾಗಿದೆ. ಇದರಲ್ಲಿ 527 ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಯುವಕರು. ಇಂದಿನ ಪೀಳಿಗೆಯ ಜನರು ಇದನ್ನೆಲ್ಲ ಕಲಿಯಬೇಕು. ಸೇನಾಧಿಕಾರಿಯೊಬ್ಬರ ಪುತ್ರಿ ಇಶಾನಿಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದು, ಪ್ರಧಾನಿಯಾಗಿ ಅವರು ನಿಜವಾಗಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ನ್ನು ವಾರ್ಷಿಕವಾಗಿ ಜುಲೈ 26 ರಂದು ಆಚರಿಸಲಾಗುತ್ತದೆ, 1999 ರಲ್ಲಿ ಆಪರೇಷನ್ ವಿಜಯ್ ಯಶಸ್ಸನ್ನು ಸ್ಮರಿಸುತ್ತದೆ. ಈ ಸಂಘರ್ಷದ ಸಮಯದಲ್ಲಿ, ಭಾರತೀಯ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರು ನುಸುಳಿದ್ದ ಆಯಕಟ್ಟಿನ ಸ್ಥಾನಗಳನ್ನು ಯಶಸ್ವಿಯಾಗಿ ಮರಳಿ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT