ಪ್ರಶಾಂತ್ ಕಿಶೋರ್ TNIE
ದೇಶ

ಅ.2ರಂದು ರಾಜಕೀಯ ಪಕ್ಷ ಪ್ರಾರಂಭಿಸುವೆ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್

ಪಾಟ್ನಾ ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದರು.

ಪಾಟ್ನಾ ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದರು.

ಪ್ರಶಾಂತ್ ಕಿಶೋರ್ ಪಕ್ಷವು 2025ರಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಾಟ್ನಾದಲ್ಲಿ ನಡೆದ ಜನ್ ಸೂರಜ್ ನ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪ್ರಶಾಂತ್ ಕಿಶೋರ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಜೈ ಬಿಹಾರ್, ಜೈ-ಜೈ ಬಿಹಾರ್ ಎಂದು ಚರ್ಚಿಸಿದರು.

ಅಕ್ಟೋಬರ್ 2ರಂದು ತನ್ನದೇ ಆದ ಪಕ್ಷವನ್ನು ರಚಿಸುವುದಾಗಿ ಮತ್ತು ಬಿಹಾರದಲ್ಲಿ ತನ್ನ ಪಕ್ಷ 'ಜನ್ ಸೂರಜ್' ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಪಿಕೆ ಹೇಳಿದರು. ಪಕ್ಷ ಕಟ್ಟುವ ಮುನ್ನ ಪಾಟ್ನಾದ ಬಾಪು ಆಡಿಟೋರಿಯಂನಲ್ಲಿ ಜನ್ ಸೂರಜ್ ಕಾರ್ಯಕರ್ತರ ದೊಡ್ಡ ಸಮಾವೇಶವಿತ್ತು. ಪಕ್ಷದ ನಾಯಕ ಯಾರು ಎನ್ನುವುದನ್ನೂ ಜನ ನಿರ್ಧರಿಸುತ್ತಾರೆ. ಜನ್ ಸೂರಜ್ ಪ್ರಶಾಂತ್ ಕಿಶೋರ್ ಅಥವಾ ಯಾವುದೇ ಜಾತಿ ಅಥವಾ ಯಾವುದೇ ಕುಟುಂಬ ಅಥವಾ ವ್ಯಕ್ತಿಯ ಪಕ್ಷವಾಗಿರುವುದಿಲ್ಲ, ಆದರೆ ಬಿಹಾರದ ಜನರು ಒಟ್ಟಾಗಿ ಅದನ್ನು ರಚಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಸುಮಾರು ಒಂದು ಕೋಟಿ ಸದಸ್ಯರು ಜನ್ ಸೂರಜ್ ಅಡಿಪಾಯವನ್ನು ಹಾಕುತ್ತಾರೆ. ಮೊದಲ ದಿನ 1.50 ಲಕ್ಷ ಜನರನ್ನು ಪದಾಧಿಕಾರಿಗಳನ್ನಾಗಿ ನಾಮಕರಣ ಮಾಡುವ ಮೂಲಕ ಆರಂಭವಾಗಲಿದೆ. ಆದರೆ ತಾನು ಪಕ್ಷವನ್ನು ಮುನ್ನಡೆಸುವುದಿಲ್ಲ ಎಂದರು. ಆದರೆ ನಾಯಕರು ಆಯಾ ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ. ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದು ಜನರ ಬಲವನ್ನು ಬಲಪಡಿಸುತ್ತದೆ ಎಂದರು.

2025ರಲ್ಲಿ ಪಕ್ಷ ಜನಪರ ಆಡಳಿತ ತರಲಿದೆ ಎಂದು ಪಿ.ಕೆ. ಕೆಲಸ ಅರಸಿ ಪಂಜಾಬ್ ಮತ್ತು ಹರಿಯಾಣಕ್ಕೆ ಹೋಗುವ ಬಿಹಾರದ ಜನರಿಗೆ ಆಯಾ ಸ್ಥಳಗಳಲ್ಲಿ ಉದ್ಯೋಗ ಸಿಗುವಂತೆ ಮಾಡಲು ಪಕ್ಷವು ಶ್ರಮಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಅರಸಿ ಹೊರಗಿನ ಜನರು ಬಿಹಾರಕ್ಕೆ ಬರಬಹುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT