ಹಳಿತಪ್ಪಿದ 12810 ಹೊವಾರಾ-CSMT ಎಕ್ಸ್‌ಪ್ರೆಸ್. 
ದೇಶ

ಜಾರ್ಖಂಡ್‌ನಲ್ಲಿ ಹಳಿತಪ್ಪಿದ ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌: ಇಬ್ಬರು ಸಾವು, 20 ಮಂದಿಗೆ ಗಾಯ

ಆಗ್ನೇಯ ರೈಲ್ವೆಯ (SER) ಚಕ್ರಧರಪುರ ವಿಭಾಗದ ಅಡಿಯಲ್ಲಿ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಇಂದು ನಸುಕಿನ ಜಾವ 3.45ಕ್ಕೆ ಅಪಘಾತ ಸಂಭವಿಸಿದೆ.

ನವದೆಹಲಿ: ಇಂದು ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಚಕ್ರಧರಪುರ ಜಿಲ್ಲೆಯ ರಾಜ್‌ಖರ್ಸಾವನ್ ಮತ್ತು ಬಡಬಾಂಬೋ ನಡುವೆ 12810 ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ನ 18 ಬೋಗಿಗಳು ಹಳಿತಪ್ಪಿ ಇಬ್ಬರು ಮೃತಪಟ್ಟು 20 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಆಗ್ನೇಯ ರೈಲ್ವೆಯ (SER) ಚಕ್ರಧರಪುರ ವಿಭಾಗದ ಅಡಿಯಲ್ಲಿ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಇಂದು ನಸುಕಿನ ಜಾವ 3.45ಕ್ಕೆ ಅಪಘಾತ ಸಂಭವಿಸಿದೆ.

ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಧಾವಿಸುತ್ತಿದೆ ಎಂದು ಅಪಘಾತ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಡಿಸಿ ಪಶ್ಚಿಮ ಸಿಂಗ್‌ಭೂಮ್ ಕುಲದೀಪ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.

ಅಪಘಾತದ ಸ್ಥಳವು ಪಶ್ಚಿಮ ಸಿಂಗ್ಭೂಮ್ ಮತ್ತು ಸೆರೈಕೆಲಾ-ಖರ್ಸಾವಾನ್ ಜಿಲ್ಲೆಗಳ ನಡುವಿನ ಗಡಿಯ ಸಮೀಪದಲ್ಲಿದೆ. ಈ ರೈಲಿನ ಇಂಜಿನ್ ಕೂಡ ಹಳಿ ತಪ್ಪಿದೆ. ಹಳಿತಪ್ಪಿದ ಬೋಗಿಗಳ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಸಮೀಪದ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

ರೈಲ್ವೆ ಹಂಚಿಕೊಂಡ ಆರಂಭಿಕ ವರದಿಯ ಪ್ರಕಾರ, ಹಳಿತಪ್ಪುವಿಕೆಯಿಂದ ಹೌರಾ-ಮುಂಬೈ ರೈಲು ಮಾರ್ಗಗಳಲ್ಲಿ ಚಲನೆಗೆ ಅಡ್ಡಿಯಾಗಿದೆ. ಆಗ್ನೇಯ ರೈಲ್ವೆ ಕೆಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ, ಇದರಲ್ಲಿ 22861 ಹೌರಾ-ತಿತ್ಲಗಢ-ಕಾಂತಬಾಂಜಿ ಇಸ್ಪತ್ ಎಕ್ಸ್‌ಪ್ರೆಸ್ ಮತ್ತು 12021 ಹೌರಾ-ಬರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿವೆ.

ರೈಲ್ವೆ ವೈದ್ಯಕೀಯ ವ್ಯಾನ್ ಮತ್ತು ಇತರ ರಕ್ಷಣಾ ಸೌಲಭ್ಯಗಳು ರೈಲಿನ 18 ಬೋಗಿಗಳು ಹಳಿ ತಪ್ಪಿದ ನಂತರ ಆಗ್ನೇಯ ರೈಲ್ವೆ ಮಂಗಳವಾರ ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ.

ಮುಂಬೈ ಸಹಾಯವಾಣಿ ಸಂಖ್ಯೆಗಳು

ಮುಂಬೈ - 022-22694040, ದಾದರ್ - 9136452387, ಕಲ್ಯಾಣ್ - 8356848078 ಮತ್ತು ಥಾಣೆ - 9321336747.

ಹೌರಾದ ಸಹಾಯವಾಣಿ ಸಂಖ್ಯೆಗಳು 9433357920 ಮತ್ತು 033-26382217, ಮತ್ತು ಶಾಲಿಮಾರ್ 7595074427 ಮತ್ತು 6295531471 ಮತ್ತು ಖರಗ್‌ಪುರಕ್ಕೆ 03222-293764

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT