ಸಾಂಕೇತಿಕ ಚಿತ್ರ online desk
ದೇಶ

ಜೈಲಿನ ಸಹಕೈದಿಗಳಿಂದ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಹತ್ಯೆ!

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಯನ್ನು ಆತನೊಂದಿಗೆ ಇದ್ದ ಐವರು ಸಹ ಕೈದಿಗಳೇ ಹತ್ಯೆ ಮಾಡಿರುವ ಘಟನೆ ಕೋಲ್ಹಾಪುರದ ಕಲಂಬಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಯನ್ನು ಆತನೊಂದಿಗೆ ಇದ್ದ ಐವರು ಸಹ ಕೈದಿಗಳೇ ಹತ್ಯೆ ಮಾಡಿರುವ ಘಟನೆ ಕೋಲ್ಹಾಪುರದ ಕಲಂಬಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಮೇಲ್ನೋಟಕ್ಕೆ ಜೈಲಿನಲ್ಲಿ ಸ್ನಾನ ಮಾಡುವುದಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು 59 ವರ್ಷದ ಮುನ್ನ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಭವರ್ಲಾಲ್ ಗುಪ್ತಾ ವಿರುದ್ಧ 5 ಮಂದಿ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಾಂಬ್ ಸ್ಫೋಟ ಪ್ರಕರಣದಲ್ಲಿ ಖಾನ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದರು. ವಾಗ್ವಾದ ನಡೆಯುತ್ತಿದ್ದಾಗ ವಿಚಾರಣಾಧೀನ ಕೈದಿಯೋರ್ವ ಚರಂಡಿಗೆ ಹಾಕಲಾಗಿದ್ದ ಕಬ್ಬಿಣದ ಪೈಪ್ ಎಳೆದು ಖಾನ್ ತಲೆಗೆ ಬಲವಾಗಿ ಪ್ರಹಾರ ಮಾಡಿದ್ದಾನೆ.

ಪರಿಣಾಮ ಕುಸಿದುಬಿದ್ದು ಖಾನ್ ಸಾವನ್ನಪ್ಪಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ ಖಾನ್ ನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆ ವೇಳೆಗೆ ಸಾವನ್ನಪ್ಪಿದ್ದ. ದಾಳಿಕೋರರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವಾಣ್, ಋತುರಾಜ್ ವಿನಾಯಕ್ ಇನಾಮದಾರ್ ಮತ್ತು ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!

ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗಾಗಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್, video!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

Toxic Trailer: ಹಿರೋಯಿನ್ ಎದುರು ಯಶ್ ಬೆತ್ತಲೆ ಸೀನ್ ನೋಡಿ ಅಭಿಮಾನಿಗಳು ದಂಗು; ಬಾಕ್ಸ್ ಆಫೀಸ್ ನಲ್ಲಿ 3000 ಕೋಟಿ ಫಿಕ್ಸ್ ಎಂದ ಫ್ಯಾನ್ಸ್!