ರಾಷ್ಟ್ರೀಯ ಹೆದ್ದಾರಿ 
ದೇಶ

NHAI ನಿಂದ ಹೆದ್ದಾರಿಗಳ ಟೋಲ್ ಶೇ.5 ರಷ್ಟು ಏರಿಕೆ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಎಕ್ಸ್ ಪ್ರೆಸ್ ವೇ ಗಳನ್ನು ಬಳಕೆ ಮಾಡುವ ವಾಹನ ಸವಾರರು ನಾಳೆಯಿಂದ ಟೋಲ್ ಗಳಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ.

ನವದೆಹಲಿ: ಎಕ್ಸ್ ಪ್ರೆಸ್ ವೇ ಗಳನ್ನು ಬಳಕೆ ಮಾಡುವ ವಾಹನ ಸವಾರರು ನಾಳೆಯಿಂದ ಟೋಲ್ ಗಳಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶಾದ್ಯಂತ ಹೆದ್ದಾರಿಗಳ ಟೋಲ್ ದರವನ್ನು ಶೇ.5 ರಷ್ಟು ಏರಿಕೆ ಮಾಡಿದೆ. ಟೋಲ್ ದರ ವಾರ್ಷಿಕ ಶೇ.5 ರಷ್ಟು ಹೆಚ್ಚಾಗುವುದು ವಾಡಿಕೆ. ಏ.1 ರಿಂದ ಪರಿಷ್ಕೃತ ದರ ಜಾರಿಯಾಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಪರಿಷ್ಕೃತ ದರ ವಿಳಂಬವಾಗಿತ್ತು.

03.06.2024 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು NHAI ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿಪಿಐ ಆಧಾರಿತ ಹಣದುಬ್ಬರಕ್ಕೆ ಅನುಗುಣವಾಗಿ NHAI ದರ ಪರಿಷ್ಕರಣೆಯಾಗುತ್ತಿರುತ್ತದೆ.

ರಾಷ್ಟ್ರೀಯ ಹೆದ್ದಾರಿ ನೆಟ್‌ವರ್ಕ್‌ನಲ್ಲಿ ಸುಮಾರು 855 ಬಳಕೆದಾರರ ಶುಲ್ಕ ಪ್ಲಾಜಾಗಳಿದ್ದು, ಇವುಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ಬಳಕೆದಾರರ ಶುಲ್ಕವನ್ನು ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel