ಕೆ ಕವಿತಾ 
ದೇಶ

ಅಬಕಾರಿ ನೀತಿ ಪ್ರಕರಣ: BRS ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ನ್ಯಾಯಾಲಯವು ಜುಲೈ 3 ರವರೆಗೆ ಸೋಮವಾರ ವಿಸ್ತರಿಸಿದೆ.

ನವದೆಹಲಿ: ಆಪಾದಿತ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ನ್ಯಾಯಾಲಯವು ಜುಲೈ 3 ರವರೆಗೆ ಸೋಮವಾರ ವಿಸ್ತರಿಸಿದೆ.

ಕವಿತಾ ಅವರ ವಿರುದ್ಧ ಪ್ರೊಡಕ್ಷನ್ ವಾರಂಟ್ ಹೊರಡಿಸಿದ ಹಿಂದಿನ ಆದೇಶದ ಅನ್ವಯ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ನ್ಯಾಯಾಂಗ ಬಂಧನ ಅವರಧಿಯನ್ನು ವಿಸ್ತರಿಸಿದರು.

ದೆಹಲಿ ಅಪಕಾರಿ ಹಗರಣದಲ್ಲಿ ಇಡಿ ಮತ್ತು ಸಿಬಿಐ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಕವಿತಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯಾಯಾಲಯವು ಇದೇ ಪ್ರಕರಣದಲ್ಲಿ ಮೂವರು ಸಹ ಆರೋಪಿಗಳಾದ ಪ್ರಿನ್ಸ್, ದಾಮೋದರ್ ಮತ್ತು ಅರವಿಂದ್ ಸಿಂಗ್ ಅವರಿಗೆ ಜಾಮೀನು ನೀಡಿದೆ.

ಸದ್ಯ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 46 ವರ್ಷದ ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ಮಾರ್ಚ್ 15ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup: Super 8 ಪ್ರವೇಶಿಸಿ ಜಿಂಬಾಬ್ವೆ ಇತಿಹಾಸ ಸೃಷ್ಟಿ; 17 ವರ್ಷಗಳ ನಂತರ Australia ಟೂರ್ನಿನಿಂದ ಔಟ್!

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ- ಅಶ್ವಿನಿ ವೈಷ್ಣವ್

ಮಗನಿಗೆ ಸಿದ್ದರಾಮಯ್ಯ ಮೂಗುದಾರ: ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲ್ಲ ಎಂದ MLC ಯತೀಂದ್ರ!

ಭಾರತದ ಸಪ್ತ ಸಹೋದರಿಯರು: ಮತ್ತೆ ಪ್ರಸ್ತಾಪಿಸಿ ಮೊಹಮ್ಮದ್ ಯೂನಸ್ ವಿವಾದಕ್ಕೆ ಗುರಿ!

ಕರ್ನಾಟಕದ ಯಾವ ಶಾಸಕನಿಗೂ ಕ್ಷೇತ್ರದ ಅಭಿವೃದ್ಧಿಯನ್ನು ಸೋಮಣ್ಣನ ತರ ಮಾಡೋಕೆ ಸಾಧ್ಯವಿಲ್ಲ: ಸಚಿವ ಜಮೀರ್ ಪ್ರಶಂಸೆ

SCROLL FOR NEXT