ಒಡಿಶಾ: ಒಡಿಶಾದಲ್ಲಿ ಶಾಖಾಘಾತದಿಂದ ಇಂದು ಇಬ್ಬರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಶಾಖಾಘಾತಕ್ಕೆ ಸಂಬಂಧಿಸಿದಂತೆ ಬೇಸಿಗೆಯಲ್ಲಿ ರಾಜ್ಯದಲ್ಲಿ ಒಟ್ಟು 151 ಮಂದಿ ಸಾವನ್ನಪ್ಪಿದ್ದರೆ, 36 ಸಾವಿನ ಪ್ರಕರಣಗಳು ಉಷ್ಣಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಉಂಟಾಗಿದ್ದಾಗಿದೆ. ಉಳಿದಂತೆ 31 ಶಾಖಾಘಾತದಿಂದ ಸಂಭವಿಸಿದ್ದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ 84 ಸಾವಿನ ಪ್ರಕರಣಗಳಿಗೆ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿಶೇಷ ಪರಿಹಾರ ಆಯುಕ್ತರು ತಿಳಿಸಿದ್ದಾರೆ. 24 ಗಂಟೆಗಳಲ್ಲಿ ಇಬ್ಬರು ಶಾಖಾಘಾತದಿಂದ ಸಾವನ್ನಪ್ಪಿದ್ದಾರೆ. ಎಕ್ಸ್ ಗ್ರೇಷಿಯಾ ಮಂಜೂರಾತಿಗಾಗಿ ಪ್ರತಿ ಶಂಕಿತ ಸನ್‌ಸ್ಟ್ರೋಕ್ ಸಾವಿನ ಮರಣೋತ್ತರ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಜಿಲ್ಲೆಗಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಪ್ರತಿ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸ್ಥಳೀಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ವೈದ್ಯಾಧಿಕಾರಿ ಜಂಟಿ ವಿಚಾರಣೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.