ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿದೆ. ಸಂಸತ್‌ನಲ್ಲಿನ ಅಗತ್ಯ ಬಹುಮತಕ್ಕಿಂತ 20 ಸ್ಥಾನಗಳನ್ನು ಅಧಿಕವಾಗಿಯೇ ಗೆದ್ದಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಕಮಲ ಪಡೆ ಹಲವೆಡೆ ತಮ್ಮ ಬಲವನ್ನು ಕಳೆದುಕೊಂಡಿದೆ. 5 ರಾಜ್ಯಗಳಲ್ಲಿ 38 ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ.
ಈ ಸೋಲಿಗೆ ರೈತರ ಕಡೆಗಣಿಸಿದ್ದೂ ಕೂಡ ಕಾರಣವೆಂದು ಹೇಳಲಾಗುತ್ತಿದೆ. ಪ್ರತಿಭಟನೆ ಎದುರಾಗಿದ್ದ ರಾಜ್ಯಗಳಲ್ಲಿ ರೈತರು ಬಿಜೆಪಿಯನ್ನು ಕಡೆಗಣಿಸಿರುವುದು ಫಲಿತಾಂಶದಿಂದ ತಿಳಿದುಬಂದಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿತ್ತು. ಇದರ ಪರಿಣಾಮ 2019 ರಲ್ಲಿ ವಿವಿಧ ರಾಜ್ಯಗಳಲ್ಲಿ ಗೆದ್ದಿದ್ದ ಸ್ಥಾನಗಳನ್ನೂ ಬಿಜೆಪಿ ಕಳೆದುಕೊಂಡಿದೆ. ಇದಲ್ಲದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಜಾರ್ಖಂಡ್‌ನಲ್ಲಿ ದೊಡ್ಡ ಅಂತರದಿಂದ ಸೋಲು ಕಂಡಿರುವುದು ಕೂಡ ಮುಖ್ಯವಾಗಿದೆ.
ಬಿಜೆಪಿ ಪಶ್ಚಿಮ ಯುಪಿ, ಹರಿಯಾಣ ಮತ್ತು ಪಂಜಾಬ್‌ನ ರೈತರ ಅಸಮಾಧಾನವನ್ನು ಬಿಜೆಪಿ ವರ್ಷಾನುಗಟ್ಟಲೆ ಎದುರಿಸಿತ್ತು. ಈ ಪ್ರದೇಶಗಳ ರೈತರು ಎಂಎಸ್ಪಿ ಮತ್ತು 3 ಕೃಷಿ ಕಾನೂನುಗಳ ಬಗ್ಗೆ ಬಿಜೆಪಿ ವಿರುದ್ಧ ಕೋಪಗೊಂಡಿದ್ದರು. ಈ ವಲಯದಲ್ಲಿ ಬಿಜೆಪಿ ವಿರೋಧಿ ಅಲೆ ಏಳಲು ಇದು ಕೂಡ ಕಾರಣ. ಅಲ್ಲದೆ, ಬಿಜೆಪಿ ವಿರುದ್ಧ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಜಾಟ್ ಸಮುದಾಯದಲ್ಲಿ ಮುನಿಸು ಮನೆಮಾಡಿತ್ತು.
ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಬ್ರಿಜ್ ಭೂಷಣ್ ವಿರುದ್ಧ ಬಿಜೆಪಿ ತಕ್ಷಣ ಕ್ರಮ ಕೈಗೊಳ್ಳದೆ, ತಿಂಗಳುಗಟ್ಟಲೆ ಸತಾಯಿಸಿದ್ದು, ಮಹಿಳೆಯರ ಮುನಿಸು ಹೆಚ್ಚಿಸಿತ್ಕು, 2019ರಲ್ಲಿ ಹರಿಯಾಣದ ಶೇ.60ರಷ್ಟು ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದರು. ಅಂತಹ ಬೆಂಬಲ ಈ ಬಾರಿ ಸಿಕ್ಕಿಲ್ಲ.
ಪಶ್ಚಿಮ ಯುಪಿ, ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ 38 ಸ್ಥಾನಗಳನ್ನು ಕಳೆದುಕೊಂಡಿದೆ.
ಪಶ್ಚಿಮ ಯುಪಿಯಲ್ಲಿ, ಮುಜಾಫರ್‌ನಗರ, ಸಹರಾನ್‌ಪುರ, ಕೈರಾನಾ, ನಗೀನಾ, ಮೊರಾದಾಬಾದ್, ಸಂಭಾಲ್, ರಾಂಪುರ್ ಮತ್ತು ಲಖಿಂಪುರ ಖೇರಿಯಲ್ಲಿ ಬಿಜೆಪಿ ಸೋಲು ಕಂಡಿದೆ. ಇದಲ್ಲದೆ, ಹಿಂದಿನ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಗೆದ್ದಿದ್ದ ಎರಡು ಸ್ಥಾನಗಳನ್ನೂ ಬಿಜೆಪಿ ಕಳೆದುಕೊಂಡಿತು,
ಜೊತೆಗೆ ರಾಜಸ್ಥಾನದಲ್ಲಿ 11 ಮತ್ತು ಹರಿಯಾಣದಲ್ಲಿ ಐದು ಸ್ಥಾನಗಳನ್ನು ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 13ರ ಪೈಕಿ 12 ಸ್ಥಾನಗಳನ್ನು ಕಳೆದುಕೊಂಡಿದೆ,
ಈರುಳ್ಳಿ ಬೆಳೆಯುವ ರೈತರು ಮತ್ತು ವ್ಯಾಪಾರಿಗಳ ಹಿತಾಸಕ್ತಿಗೆ ವಿರುದ್ಧವಾದ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇದು ಬೆಲೆ ಕುಸಿತಕ್ಕೆ ಕಾರಣವಾಯಿತು, ಇದು ವ್ಯಾಪಾರಿಗಳು ಮತ್ತು ರೈತರ ಮೇಲೆ ಪರಿಣಾಮ ಬೀರಿತ್ತು. ರೈತರ ಆಕ್ರೋಶ ಹೆಚ್ಚಾಗುವಂತೆ ಮಾಡಿತ್ತು. ಕೇವಲ ಲೋಕಸಭೆ ಚುನಾವಣೆ ಅಷ್ಟೇ ಅಲ್ಲ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂದು ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಖಂಡು ಕಾಕಾ ದೇವ್ರೆ ಹೇಳಿದ್ದಾರೆ.
ಈ ನಡುವೆ ಲೋಕಸಭೆ ಚುನಾವಣೆಲ್ಲಿ ಬಿಜೆಪಿಗೆ ಬಹುಮತ ನೀಡದ್ದಕ್ಕೆ ಜನತಗೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಭಿನಂದನೆ ಸಲ್ಲಿಸಿದೆ.