ಸಂಗ್ರಹ ಚಿತ್ರ 
ದೇಶ

95 ಬಾರಿ ಚಾಕುವಿನಿಂದ ಇರಿದು ಅತ್ತೆಯನ್ನು ಬರ್ಬರವಾಗಿ ಕೊಂದಿದ್ದ ಸೊಸೆಗೆ ಮರಣದಂಡನೆ ಶಿಕ್ಷೆ!

ಕೌಟುಂಬಿಕ ಕಲಹದ ವೇಳೆ ಅತ್ತೆಯನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ ಸೊಸೆಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ತನ್ನ ಅತ್ತೆಗೆ ಸೊಸೆ ಕುಡುಗೋಲಿನಿಂದ 95ಕ್ಕೂ ಹೆಚ್ಚು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಳು.

ಕೌಟುಂಬಿಕ ಕಲಹದ ವೇಳೆ ಅತ್ತೆಯನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ ಸೊಸೆಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ತನ್ನ ಅತ್ತೆಗೆ ಸೊಸೆ ಕುಡುಗೋಲಿನಿಂದ 95ಕ್ಕೂ ಹೆಚ್ಚು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಳು.

ಮಧ್ಯಪ್ರದೇಶದ ರೇವಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪದ್ಮಾ ಜಾತವ್ ಈ ತೀರ್ಪು ನೀಡಿದ್ದಾರೆ. ಈ ನಿರ್ಧಾರದಲ್ಲಿ, ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಸೊಸೆ ಕಾಂಚನ್ ಕೋಲ್‌ಗೆ ಮರಣದಂಡನೆ ವಿಧಿಸಲಾಗಿದೆ.

ಈ ಐತಿಹಾಸಿಕ ತೀರ್ಪಿನ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ವಿಕಾಸ್ ದ್ವಿವೇದಿ, ಸುಮಾರು 2 ವರ್ಷಗಳ ಹಿಂದೆ 2022ರ ಜುಲೈ 12ರಂದು ಮಂಗಾವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರೈಲಾ ಪ್ಲಾಂಟ್ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದಾಗಿ ಆರೋಪಿ ಸೊಸೆ ಕಾಂಚನ್ ಅತ್ತೆ ಸರೋಜ್ ಕೋಲ್ (50) ಅವರಿಗೆ ಕುಡುಗೋಲಿನಿಂದ ಚುಚ್ಚಿ ಕೊಲೆ ಮಾಡಿದ್ದಳು.

ಕೊಲೆಯ ವಿಧಾನವು ಎಷ್ಟು ಕ್ರೂರವಾಗಿತ್ತು ಎಂದರೆ ಸೊಸೆ ತನ್ನ ಅತ್ತೆಯ ಮೇಲೆ 95 ಬಾರಿ ಕುಡುಗೋಲಿನಿಂದ ಹಲ್ಲೆ ಮಾಡಿದ್ದಳು. ಘಟನೆ ವೇಳೆ ಮನೆಯಲ್ಲಿ ಅತ್ತೆ ಒಬ್ಬರೇ ಇದ್ದರು. ಮೃತ ಸರೋಜಳ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಸೊಸೆ ಕಾಂಚನ್ ಕೋಲ್ ಜೊತೆಗೆ ಸರೋಜ್ ಕೋಲ್ ಅವರ ಪತಿ ವಾಲ್ಮೀಕಿ ಕೋಲ್ ಅವರನ್ನೂ ಪೊಲೀಸರು ಆರೋಪಿಯನ್ನಾಗಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಾಲ್ಮೀಕಿಯನ್ನು ಖುಲಾಸೆಗೊಳಿಸಲಾಯಿತು. ಈ ಹಿಂದೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಕೈದಿ ಮತ್ತು ಜೈಲು ಸಿಬ್ಬಂದಿಗೆ ಮರಣದಂಡನೆ ವಿಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಡಾಖ್ ಹಿಂಸಾಚಾರಕ್ಕೆ ನಾಲ್ವರು ಬಲಿ: 30 ಜನರಿಗೆ ಗಾಯ; ಬಿಜೆಪಿ ಕಚೇರಿ, ಪೊಲೀಸ್ ವ್ಯಾನ್ ಗೆ ಬೆಂಕಿ; Video

ನನ್ನ ರಾಷ್ಟ್ರ ನಿರ್ಮಾಣದ ಆಶಯಗಳಿಗೆ ಎಸ್ಎಲ್ ಭೈರಪ್ಪನವರೇ ಪ್ರೇರಣೆ: BJP ಸಂಸದ ತೇಜಸ್ವೀ ಸೂರ್ಯ

Asia Cup 2025: ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್, ದಾಖಲೆ ಬರೆದ Team India!

SL Bhyrappa ನಿಧನ: ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ

ಜಾತಿ ಗಣತಿಗೆ ತಡೆ ಕೋರಿ ಅರ್ಜಿ; ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್

SCROLL FOR NEXT