ನವದೆಹಲಿ: ಕೇಂದ್ರ ಸರ್ಕಾರ ನಿವೃತ್ತ ಐಪಿಎಸ್ ಅಧಿಕಾರಿ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಮರು ನೇಮಕ ಮಾಡಿದೆ.
ಪ್ರಧಾನಿ ಮೋದಿ ಅವರ ಅಧಿಕಾರಾವಧಿವರೆಗೂ ಅಥವಾ ಮುಂದಿನ ಆದೇಶದ ವರೆಗೆ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.
10.06.2024 ರಿಂದ ಜಾರಿಗೆ ಬರುವಂತೆ ಅಜಿತ್ ದೋವಲ್, IPS (ನಿವೃತ್ತ) ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ" ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅವರ ಕಾರ್ಯನಿರ್ವಹಣಾ ಅವಧಿಯಲ್ಲಿ ದೋವಲ್ ಅವರಿಗೆ ಪ್ರಾಶಸ್ತ್ಯದ ಕೋಷ್ಟಕದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನವನ್ನು ನಿಗದಿಪಡಿಸಲಾಗುವುದು, ಅವರ ನೇಮಕಾತಿಯ ನಿಯಮಗಳು ಮತ್ತು ಷರತ್ತುಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.