ಪುರಿ ಜಗನ್ನಾಥ ದೇಗುಲ 
ದೇಶ

ಕೊಟ್ಟ ಭರವಸೆ ಈಡೇರಿಸಿದ ಬಿಜೆಪಿ: ಪುರಿ ಜಗನ್ನಾಥ ದೇಗುಲದ ಎಲ್ಲಾ ನಾಲ್ಕು ಗೇಟ್ ಗಳು ಪ್ರವೇಶಕ್ಕೆ ಮುಕ್ತ

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಅವರ ಸಚಿವ ಸಂಪುಟದ ಸಮ್ಮುಖದಲ್ಲಿ ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ಗುರುವಾರ ಬೆಳಗ್ಗೆ ತೆರೆಯಲಾಯಿತು.

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಅವರ ಸಚಿವ ಸಂಪುಟದ ಸಮ್ಮುಖದಲ್ಲಿ ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ಗುರುವಾರ ಬೆಳಗ್ಗೆ ತೆರೆಯಲಾಯಿತು.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಮುಚ್ಚಲಾಗಿದ್ದ 12 ನೇ ಶತಮಾನದ ದೇಗುಲದ ಮೂರು ದ್ವಾರಗಳನ್ನು ಭಗವಾನ್ ಜಗನ್ನಾಥನ 'ಮಂಗಳ ಆರತಿ' ಆಚರಣೆಯ ನಂತರ ಮತ್ತೆ ತೆರೆಯಲಾಯಿತು.

ಮುಖ್ಯಮಂತ್ರಿ, ಇಬ್ಬರು ಉಪ ಮುಖ್ಯಮಂತ್ರಿಗಳು, ಸಚಿವರು, ಹಲವು ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ಜಗನ್ನಾಥ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಾಲಯದ ಸಂಕೀರ್ಣದ ಸುತ್ತಲೂ 'ಪರಿಕ್ರಮ'ವನ್ನೂ ನಡೆಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ, ಬಿಜೆಪಿ ಸರ್ಕಾರವು ನಿನ್ನೆ ಬುಧವಾರ ಸಂಜೆ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ತೆರೆಯಲು ತನ್ನ ಮೊದಲ ನಿರ್ಧಾರವನ್ನು ತೆಗೆದುಕೊಂಡಿದೆ. ಇಂದು, 'ಮಂಗಳ ಆರತಿ' ಆಚರಣೆಯ ನಂತರ ಬೆಳಗ್ಗೆ 6.30 ಕ್ಕೆ ಗೇಟ್‌ಗಳನ್ನು ಮತ್ತೆ ತೆರೆಯಲಾಯಿತು ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪುರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಅಗತ್ಯವಿದ್ದರೆ ದೇಗುಲಕ್ಕೆ ಭಕ್ತರ ಹರಿವನ್ನು ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ದೇವಾಲಯದ ಉತ್ತಮ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಒಡಿಶಾ ಸರ್ಕಾರವು 500 ಕೋಟಿ ರೂಪಾಯಿ ಕಾರ್ಪಸ್ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಬರುವ ರಾಜ್ಯ ಬಜೆಟ್‌ನಲ್ಲಿ ಇದನ್ನು ಒದಗಿಸಲಾಗುವುದು ಎಂದು ಮಾಝಿ ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ದೇವಾಲಯದ ಎಲ್ಲಾ ಬಾಗಿಲುಗಳನ್ನು ತೆರೆಯುವುದು ಪ್ರಮುಖ ಭರವಸೆಯಾಗಿತ್ತು. ಹಿಂದಿನ ಬಿಜೆಡಿ ಸರ್ಕಾರವು COVID-19 ಸಾಂಕ್ರಾಮಿಕ ರೋಗದಿಂದ ನಾಲ್ಕು ಗೇಟ್‌ಗಳಲ್ಲಿ ಮೂರನ್ನು ಮುಚ್ಚಿತ್ತು. ಭಕ್ತರಿಗೆ ಸಿಂಗದ್ವಾರ (ಸಿಂಹದ್ವಾರ) ಮೂಲಕ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಯಿತು, ಆದರೆ ದೇವಾಲಯದ ಇತರ ಮೂರು ಕಡೆ ಇರುವ ದ್ವಾರಗಳನ್ನು ಮುಚ್ಚಲಾಗಿದ್ದು, ಭಕ್ತರಿಗೆ ಅನಾನುಕೂಲತೆ ಉಂಟಾಗಿತ್ತು.

ಒಡಿಶಾದ ಕರಾವಳಿ ನಗರವಾದ ಪುರಿಯಲ್ಲಿರುವ ಈ ದೇವಾಲಯ ಶ್ರೀಕೃಷ್ಣ ಭಗವಾನ್ ಜಗನ್ನಾಥ ಎಂದು ಪೂಜಿಸಲಾಗುತ್ತದೆ. ನಾಲ್ಕು ಬಾರಿ ಶಾಸಕ ಮತ್ತು ಕಿಯೋಂಜಾರ್ ಬುಡಕಟ್ಟು ನಾಯಕ ಮೋಹನ್ ಚರಣ್​ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT