ದೇಶ

ಬಂಗಾಳದಲ್ಲಿ ರೈಲು ಅಪಘಾತ: ಬೆಳಿಗ್ಗೆ 5:50 ರಿಂದಲೇ ಸಿಗ್ನಲ್ ದೋಷಪೂರಿತ!

ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬಂಗಾಳದಲ್ಲಿ ಅಪಘಾತ ಸಂಭವಿಸಿದೆ.

ಬಂಗಾಳ: ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬಂಗಾಳದಲ್ಲಿ ಅಪಘಾತ ಸಂಭವಿಸಿದೆ.

ರೈಲು ಸಂಚರಿಸುತ್ತಿದ್ದ ಮಾರ್ಗದಲ್ಲಿ ರಾಣಿಪತ್ರ ರೈಲ್ವೆ ನಿಲ್ದಾಣ ಹಾಗೂ ಚತ್ತರ್ ಹಾತ್ ಜಂಕ್ಷನ್ ಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಬೆಳಿಗ್ಗೆ 5:50 ದೋಷಪೂರಿತವಾಗಿತ್ತು ಎಂದು ತಿಳಿದುಬಂದಿದೆ.

"ರೈಲು ಸಂಖ್ಯೆ 13174 (ಸೀಲ್ದಾಹ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್) ಬೆಳಿಗ್ಗೆ 8:27 ಕ್ಕೆ ರಂಗಪಾಣಿ ನಿಲ್ದಾಣದಿಂದ ಹೊರಟಿತು ಮತ್ತು 5:50 ರಿಂದ ಸ್ವಯಂಚಾಲಿತ ಸಿಗ್ನಲಿಂಗ್ ವೈಫಲ್ಯದಿಂದಾಗಿ ರಾಣಿಪತ್ರ ರೈಲು ನಿಲ್ದಾಣ ಮತ್ತು ಚತ್ತರ್ ಹ್ಯಾಟ್ ನಡುವೆ ನಿಂತಿತು" ಎಂದು ಮೂಲಗಳು ತಿಳಿಸಿವೆ.

ರೈಲ್ವೇ ಅಧಿಕಾರಿಯ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ವಿಫಲವಾದಾಗ, ಸ್ಟೇಷನ್ ಮಾಸ್ಟರ್ TA 912 ಎಂಬ ಲಿಖಿತ ಸಂದೇಶ ನೀಡುತ್ತಾರೆ, ಇದು ದೋಷದ ಕಾರಣ ವಿಭಾಗದಲ್ಲಿ ಎಲ್ಲಾ ಕೆಂಪು ಸಿಗ್ನಲ್ ದಾಟಲು ಚಾಲಕನಿಗೆ ಸೂಚನೆ ನೀಡುತ್ತದೆ. "ರಾಣಿಪತ್ರದ ಸ್ಟೇಷನ್ ಮಾಸ್ಟರ್ TA 912 ನ್ನು ರೈಲು ಸಂಖ್ಯೆ 1374 (ಸೀಲ್ದಾ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್) ಗೆ ನೀಡಿದ್ದರು" ಎಂದು ಮೂಲಗಳು ತಿಳಿಸಿವೆ.

ವೇಗದಲ್ಲಿ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಗೂಡ್ಸ್ ರೈಲಿಗೂ ಟಿಎ 912 ಅನ್ನು ನೀಡಲಾಗಿದೆಯೇ ಅಥವಾ ಲೊಕೊ ಪೈಲಟ್ ದೋಷಯುಕ್ತ ಸಿಗ್ನಲ್ ಮಾನದಂಡವನ್ನು ಉಲ್ಲಂಘಿಸಿದರೇ ಎಂಬುದನ್ನು ತನಿಖೆಯಿಂದ ಮಾತ್ರ ಕಂಡುಹಿಡಿಯಬಹುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ