ನವದೆಹಲಿ: ಅಮೇರಿಕಾ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ 9 ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಗಾರಗಳನ್ನು ಆಧುನೀಕರಿಸುವುದನ್ನು ಮುಂದುವರೆಸಿವೆ.
ಹಲವು ದೇಶಗಳು 2023 ರಲ್ಲಿ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯೋಜಿಸಿವೆ ಎಂದು ಸ್ವೀಡಿಷ್ ಚಿಂತಕರ ಚಾವಡಿ ಸೋಮವಾರ ವರದಿ ಪ್ರಕಟಿಸಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಚೀನಾದ ಪರಮಾಣು ಶಸ್ತ್ರಾಗಾರ ಜನವರಿ 2023 ರಲ್ಲಿ 410 ಸಿಡಿತಲೆಗಳಿಂದ 2024 ರ ಜನವರಿಯಲ್ಲಿ 500ಕ್ಕೆ ಏರಿದೆ ಮತ್ತು ಅದು ಮುಂದುವರೆಯುತ್ತಿದೆ ಎಂದು ತಿಳಿಸಿದೆ. ನಿಯೋಜಿತ 2,100 ಸಿಡಿತಲೆಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ಹೆಚ್ಚಿನ ಕಾರ್ಯಾಚರಣೆಯ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸಲಾಗಿದೆ ಮತ್ತು ಬಹುತೇಕ ಎಲ್ಲವು ರಷ್ಯಾ ಅಥವಾ ಯುಎಸ್‌ಗೆ ಸೇರಿವೆ ಎಂದು ವರದಿ ಹೇಳಿದೆ.
ಆದಾಗ್ಯೂ, ಮೊದಲ ಬಾರಿಗೆ ಚೀನಾ ಕೆಲವು ಸಿಡಿತಲೆಗಳನ್ನು ಹೆಚ್ಚಿನ ಕಾರ್ಯಾಚರಣೆಯ ಎಚ್ಚರಿಕೆಯಲ್ಲಿ ಇರಿಸಿದೆ ಎಂದು ನಂಬಲಾಗಿರುವುದನ್ನು ಅದು ಉಲ್ಲೇಖಿಸಿದೆ. ಒಂಬತ್ತು ಪರಮಾಣು-ಶಸ್ತ್ರಸಜ್ಜಿತ ರಾಷ್ಟ್ರಗಳು- ಅಮೇರಿಕಾ, ರಷ್ಯಾ, ಯುಕೆ, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವುದನ್ನು ಮುಂದುವರೆಸಿದೆ ಮತ್ತು ಹಲವಾರು ಹೊಸ ಪರಮಾಣು-ಸಜ್ಜಿತ ಅಥವಾ ಪರಮಾಣು-ಸಾಮರ್ಥ್ಯ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ ಎಂದು SIPRI ಹೇಳಿದೆ.
ವರದಿಯ ಪ್ರಕಾರ ಈ ವರ್ಷದ ಜನವರಿಯಲ್ಲಿ ಭಾರತ 172 ಪರಮಾಣು ಸಿಡಿತಲೆಗಳನ್ನು'ಸಂಗ್ರಹಿಸಿದ್ದರೆ, ಪಾಕಿಸ್ತಾನದ ಸಂಖ್ಯೆ 170 ಆಗಿದೆ.