ANI
ದೇಶ

ಭಾರತದ ಜಲಾಶಯಗಳಲ್ಲಿ ಶೇ.80 ರಷ್ಟು ನೀರು ಖಾಲಿ!

ಭಾರತದ ಜಲಾಶಯಗಳಲ್ಲಿ ಶೇ.80 ರಷ್ಟು ನೀರು ಖಾಲಿಯಾಗಿದೆ.

ಭಾರತದ ಜಲಾಶಯಗಳಲ್ಲಿ ಶೇ.80 ರಷ್ಟು ನೀರು ಖಾಲಿಯಾಗಿದೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಬಿಸಿಲು ಹೆಚ್ಚಾಗಿದ್ದು, ದೇಶದ 150 ಮುಖ್ಯ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಪೈಕಿ ಕೇವಲ ಶೇ.21 ರಷ್ಟು ನೀರಿದೆ ಎಂದು ತಿಳಿದುಬಂದಿದೆ.

150 ಪ್ರಮುಖ ಜಲಾಶಯಗಳ ಈಗಿನ ನೀರಿನ ಮಟ್ಟವನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಪ್ರಕಟಿಸಿದೆ.

ಈ ಜಲಾಶಯಗಳು ಜಲವಿದ್ಯುತ್ ಯೋಜನೆಗಳು, ನೀರು ಪೂರೈಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆ ಇವುಗಳಲ್ಲಿ 178.784 ಬಿಲಿಯನ್ ಕ್ಯುಬಿಕ್ ಮೀಟರ್ (ಬಿಸಿಎಂ) ಸಂಗ್ರಹ ಸಾಮರ್ಥ್ಯವಿದ್ದು, ದೇಶದ ಒಟ್ಟು ಜಲ ಸಂಗ್ರಹಣೆಯ ಸಾಮರ್ಥ್ಯದ ಶೇ.69.35 ರಷ್ಟು ಪಾಲನ್ನು ಹೊಂದಿದೆ.

ಗುರುವಾರದ ವರೆಗಿನ ವರದಿಯ ಪ್ರಕಾರ ಸಂಗ್ರಹಣೆ ಲಭ್ಯತೆ ಈ ಜಲಾಶಯಗಳಲ್ಲಿ 37.662 BCM ನಷ್ಟಿದ್ದು, ಒಟ್ಟಾರೆ ಜಲಸಂಗ್ರಹಣೆ ಸಾಮರ್ಥ್ಯದ ಶೇ.21 ರಷ್ಟಾಗಿದೆ. ಒಟ್ಟಾರೆಯಾಗಿ, 257.812 BCM ನ ಅಂದಾಜು ಒಟ್ಟು ಸಾಮರ್ಥ್ಯದಲ್ಲಿ 150 ಜಲಾಶಯಗಳಲ್ಲಿ ಲಭ್ಯವಿರುವ ನೇರ ಸಂಗ್ರಹಣೆ 54.310 BCM ಆಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 46.883 BCM ಇದ್ದ ಲೈವ್ ಸ್ಟೋರೇಜ್‌ಗಿಂತ ಗಮನಾರ್ಹ ಇಳಿಕೆಯನ್ನು ಸೂಚಿಸಿದೆ. ಪ್ರಸ್ತುತ ಸಂಗ್ರಹಣೆಯು 10-ವರ್ಷದ ಸರಾಸರಿ (ಸಾಮಾನ್ಯ) 41.446 BCM ಗಿಂತ ಕಡಿಮೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ 61 ರನ್ ಗಳ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT