ನೀಟ್ ಪರೀಕ್ಷೆ ಆಕಾಂಕ್ಷಿಗಳು TNIE
ದೇಶ

UGC-NET 2024: ಹೊಸ ಪರೀಕ್ಷಾ ದಿನಾಂಕ ಪ್ರಕಟಿಸಿದ NTA

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯ UGC NEET ಹೊಸ ಪರೀಕ್ಷೆಯ ಹೊಸ ದಿನಾಂಕಗಳ ಪ್ರಕಾರ, UGC NEET 2024ರ ಜೂನ್ ಪರೀಕ್ಷೆಯನ್ನು 2024ರ ಆಗಸ್ಟ್ 21 ರಿಂದ 2024ರ ಸೆಪ್ಟೆಂಬರ್ 04ರ ನಡುವೆ ನಡೆಸಲಾಗುವುದು.

ನವದೆಹಲಿ: ನೀಟ್ ಪೇಪರ್ ಸೋರಿಕೆ ಹಗರಣದ ಬೆನ್ನಲ್ಲೇ UGC-NET ಪರೀಕ್ಷೆಗೆ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ನಡುವೆ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು ಪ್ರಕಟಿಸಿದೆ. ಡಾರ್ಕ್‌ನೆಟ್‌ನಲ್ಲಿ ಪತ್ರಿಕೆ ಸೋರಿಕೆಯಾದ ನಂತರ ಪರೀಕ್ಷೆಯನ್ನು ರದ್ದುಗೊಳಿಸಿದ ಒಂದು ವಾರದ ನಂತರ ಈ ಘೋಷಣೆ ಮಾಡಲಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯ UGC NEET ಹೊಸ ಪರೀಕ್ಷೆಯ ಹೊಸ ದಿನಾಂಕಗಳ ಪ್ರಕಾರ, UGC NEET 2024ರ ಜೂನ್ ಪರೀಕ್ಷೆಯನ್ನು 2024ರ ಆಗಸ್ಟ್ 21 ರಿಂದ 2024ರ ಸೆಪ್ಟೆಂಬರ್ 04ರ ನಡುವೆ ನಡೆಸಲಾಗುವುದು. ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾಗಿರುತ್ತದೆ. NCET 2024 ಪರೀಕ್ಷೆಯು ಜುಲೈ 10 ರಂದು ನಡೆಯಲಿದೆ. ಜಂಟಿ CSIR UGC NET ಅನ್ನು ಜುಲೈ 25 ರಿಂದ 27 ರವರೆಗೆ ನಡೆಸಲಾಗುವುದು. ಅದೇ ಸಮಯದಲ್ಲಿ, ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ.

ಈ ಹಿಂದೆ ಮುಂದೂಡಲಾಗಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಎನ್‌ಸಿಇಟಿ) ಈಗ ಜುಲೈ 10 ರಂದು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. CSIR-UGC ನೆಟ್ ಪರೀಕ್ಷೆಯನ್ನು ಜುಲೈ 25-27 ರಿಂದ ನಡೆಸಲಾಗುವುದು. ಯುಜಿಸಿ-ನೆಟ್ ಪರೀಕ್ಷೆಗಳನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರವರೆಗೆ ಹೊಸದಾಗಿ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಆದರೆ ಪೇಪರ್ ಲೀಕ್ ಹಿನ್ನಲೆ ಮಾರನೇ ದಿನ ರದ್ದುಗೊಳಿಸಲಾಯಿತು.

ಇದೇ ವೇಳೆ ಪತ್ರಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರ ಮೂರನೇ ದಿನವೂ ಮುಂದುವರಿದಿದೆ. ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) ಮತ್ತು ದೆಹಲಿ ವಿಶ್ವವಿದ್ಯಾಲಯದ ಕ್ರಾಂತಿಕಾರಿ ಯುವ ಸಂಘಟನೆ (ಕೆವೈಎಸ್) ಸೇರಿದಂತೆ ವಿವಿಧ ಗುಂಪುಗಳು ಜಂತರ್ ಮಂತರ್‌ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಪರೀಕ್ಷೆಗಳಲ್ಲಿ ಆಪಾದಿತ ರಿಗ್ಗಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT