ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್: ಮೊಹಾಲಿಯಲ್ಲಿ ಮಾಲ್ ಹೊರಗಡೆ ಗ್ಯಾಂಗ್​ಸ್ಟರ್ ಗೆ ಗುಂಡಿಕ್ಕಿ ಹತ್ಯೆ

Lingaraj Badiger

ಚಂಡೀಗಢ: ಪಂಜಾಬ್ ನ ಮೊಹಾಲಿಯಲ್ಲಿ ಶಾಪಿಂಗ್ ಮಾಲ್ ಹೊರಗಡೆ ದುಷ್ಕರ್ಮಿಗಳು ಜಮ್ಮು ಮತ್ತು ಕಾಶ್ಮೀರದ ಗ್ಯಾಂಗ್​ಸ್ಟರ್ ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹತ್ಯೆಯಾದ ಗ್ಯಾಂಗ್​ಸ್ಟರ್ ನನ್ನು ರಾಜೇಶ್ ಡೋಗ್ರಾ ಅಲಿಯಾಸ್ ಮೋಹನ್ ಚಿರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕರಿಂದ ಐದು ಅಪರಿಚಿತ ದುಷ್ಕರ್ಮಿಗಳು ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರಾಜೇಶ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದು ಎರಡು ಗ್ಯಾಂಗ್ ಗಳ ನಡುವಿನ ಕಲಹ ಎಂಬುದು ಪ್ರಾಥಮಿಕ ತನಿಖೆಗೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಗ್ಯಾಂಗ್ ಗಳು ಜಮ್ಮುವಿಗೆ ಸಂಬಂಧಿಸಿದವರಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT