ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ 
ದೇಶ

ಆದಿತ್ಯ-ಎಲ್1 ಉಡಾವಣೆ ದಿನದಂದೇ ಇಸ್ರೋ ಮುಖ್ಯಸ್ಥ ಸೋಮನಾಥ್ ಗೆ ಕ್ಯಾನ್ಸರ್ ಇರುವುದು ಪತ್ತೆ!

Lingaraj Badiger

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಮಿಷನ್ ಉಡಾವಣೆಯಾದ ದಿನದಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ತರ್ಮಾಲ್ಕ್ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್ ಅವರು ಈ ಆಘಾತಕಾರಿ ಮಾಹಿತಿ ಹೊರ ಹಾಕಿದ್ದು, ಸ್ಕ್ಯಾನಿಂಗ್​ನಲ್ಲಿ ಹೊಟ್ಟೆಯ ಕ್ಯಾನ್ಸರ್​ ಇರುವುದು ಪತ್ತೆಯಾಗಿದ್ದು, ಕೀಮೋಥೆರಪಿ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಚಂದ್ರಯಾನ 3 ಮಿಷನ್ ಉಡಾವಣೆ ಸಮಯದಲ್ಲಿಯೂ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವು. ಆದರೆ ಅಲ್ಲಿಯವರೆಗೆ ಏನೂ ಸ್ಪಷ್ಟವಾಗಿರಲಿಲ್ಲ, ಆದಿತ್ಯ ಮಿಷನ್ ದಿನದಂದು ಕಾಯಿಲೆ ಇರುವುದು ಪತ್ತೆಯಾಯಿತು. ಇದರಿಂದ ನನ್ನ ಕುಟುಂಬದವರು ತುಂಬಾ ಬೇಸರಗೊಂಡಿದ್ದರು ಎಂದು ಸೋಮನಾಥ್ ಅವರು ಹೇಳಿದ್ದಾರೆ.

"ಆ ಸಮಯದಲ್ಲಿ ಸಂಪೂರ್ಣವಾಗಿ ಗುಣಮುಖರಾಗುವ ಬಗ್ಗೆ ಭರವಸೆ ಇರಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಚೇತರಿಕೆ ಒಂದು ಪವಾಡವೇ ಸರಿ. ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನ ಮಾತ್ರ ಇದ್ದೆ. ಐದನೇ ದಿನ ಇಸ್ರೋದಲ್ಲಿ ಕರ್ತವ್ಯಕ್ಕೆ ಮರಳಿ, ಯಾವುದೇ ನೋವು ಇಲ್ಲದೆ ಕೆಲಸ ಮಾಡಿದೆ ಎಂದು ಇಸ್ರೋ ಮುಖ್ಯಸ್ಥರು ವಿವರಿಸಿದ್ದಾರೆ.

"ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತಿದ್ದೇನೆ. ಆದರೆ ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ" ಎಂದು ಸೋಮನಾಥ್ ಅವರು ತಿಳಿಸಿದ್ದಾರೆ.

SCROLL FOR NEXT