ಮಲ್ಲಿಕಾರ್ಜುನ ಖರ್ಗೆ - ಅರವಿಂದ್ ಕೇಜ್ರಿವಾಲ್
ಮಲ್ಲಿಕಾರ್ಜುನ ಖರ್ಗೆ - ಅರವಿಂದ್ ಕೇಜ್ರಿವಾಲ್ 
ದೇಶ

ದೆಹಲಿಯಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್-ಎಎಪಿ ಜಂಟಿ ಸಮಿತಿ ರಚನೆ

Lingaraj Badiger

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಜಂಟಿ ಪ್ರಚಾರಕ್ಕಾಗಿ ಒಂದು ಅಥವಾ ಎರಡು ದಿನಗಳಲ್ಲಿ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಗುರುವಾರ ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಲವ್ಲಿ, ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಭಾಷ್ ಚೋಪ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಮತ್ತು ದೆಹಲಿಯ ಹಲವಾರು ಮಾಜಿ ಸಚಿವರು ಅದರ ಭಾಗವಾಗಲಿದ್ದಾರೆ ಎಂದು ತಿಳಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಭಾಗವಾಗಿರುವ ಕಾಂಗ್ರೆಸ್ ದೆಹಲಿಯಲ್ಲಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

"ಕಾಂಗ್ರೆಸ್ ಮತ್ತು ಎಎಪಿ ಖಂಡಿತವಾಗಿಯೂ ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ ಒಟ್ಟಾಗಿ ಪ್ರಚಾರ ಮಾಡುತ್ತವೆ. ನಾವು ಸುಭಾಷ್ ಚೋಪ್ರಾ ಅವರ ಅಧ್ಯಕ್ಷತೆಯಲ್ಲಿ ಒಂದು ಅಥವಾ ಎರಡು ದಿನಗಳಲ್ಲಿ ಸಮನ್ವಯ ಸಮಿತಿ ರಚಿಸುತ್ತೇವೆ ಮತ್ತು ಎಲ್ಲಾ ಮಾಜಿ ಮಂತ್ರಿಗಳು ಅದರ ಭಾಗವಾಗುತ್ತಾರೆ. ಅವರು ಪ್ರಚಾರಗಳನ್ನು ಸಂಯೋಜಿಸುತ್ತಾರೆ ಮತ್ತು ಎರಡೂ ಪಕ್ಷಗಳ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿವೆ" ಎಂದು ಲವ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ನ ಹರೂನ್ ಯೂಸುಫ್, ರಾಜ್ ಕುಮಾರ್ ಚೌಹಾಣ್, ಮುಖೇಶ್ ಶರ್ಮಾ, ಜೈ ಕಿಶನ್ ಮತ್ತು ರಮೇಶ್ ಕುಮಾರ್ ಅವರಂತಹ ನಾಯಕರು ಸಮಿತಿಯ ಭಾಗವಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT