ಚಂಪೈ ಸೊರೇನ್
ಚಂಪೈ ಸೊರೇನ್ 
ದೇಶ

ದೇಶದಲ್ಲೇ ಮೊದಲು: ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಧನ ಜಾರಿಗೊಳಿಸಿದ ಜಾರ್ಖಂಡ್ ಸಿಎಂ!

Shilpa D

ರಾಂಚಿ: ವಿಧವೆಯರ ಜೀವನ ಗುಣಮಟ್ಟ ಹೆಚ್ಚಳ ಮತ್ತು ಘನತೆಯ ಬದುಕು ನಡೆಸಲು ಅನುಕೂಲವಾಗುವಂತೆ ಮರು ವಿವಾಹವನ್ನು ಉತ್ತೇಜಿಸುವ ಯೋಜನೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ವಿಧವಾ ಪುನರ್ವಿವಾಹ ಪ್ರೊತ್ಸಾಹ ಯೋಜನೆ' (ವಿಧವೆ ಪುನರ್ವಿವಾಹ ಪ್ರೋತ್ಸಾಹ ಯೋಜನೆ) ಪ್ರಾರಂಭಿಸಿದರು, ಇದರ ಅಡಿಯಲ್ಲಿ ಗಂಡನ ಮರಣದ ನಂತರ ಮತ್ತೆ ಮದುವೆಯಾಗಲು ನಿರ್ಧರಿಸಿದ ಮಹಿಳೆಯರು ಸರಕಾರದಿಂದ 2 ಲಕ್ಷ ರೂ.ಗಳ ಪ್ರೋತ್ಸಾಹ ಧನ ಪಡೆಯಲಿದ್ದಾರೆ.

ಫಲಾನುಭವಿಗೆ ಮದುವೆಯ ವಯಸ್ಸಾಗಿರಬೇಕು ಮತ್ತು ಸರ್ಕಾರಿ ಉದ್ಯೋಗಿ, ಪಿಂಚಣಿದಾರ ಅಥವಾ ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಯು ಮರುಮದುವೆಯಾದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು ಮತ್ತು ತನ್ನ ದಿವಂಗತ ಪತಿಯ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಅವರು ಹೇಳಿದರು. ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯದರ್ಶಿ ಮನೋಜ್ ಕುಮಾರ್ ಮಾತನಾಡಿ, ತಮ್ಮ ಜೀವನ ಸಂಗಾತಿಯ ಮರಣದ ನಂತರ ಸಮಾಜದಲ್ಲಿ ಒಂಟಿಯಾಗಿರುವ ಮಹಿಳೆಯರು ಅಸಹಾಯಕರಾಗುತ್ತಾರೆ. ಅಂತಹ ಎಲ್ಲಾ ವಿಧವೆಯರು ಮತ್ತೆ ಮದುವೆಯಾಗಲು ನಿರ್ಧರಿಸಿದರೆ ರಾಜ್ಯವು ಅವರಿಗೆ ಆರ್ಥಿಕ ನೆರವು ನೀಡುತ್ತದೆ ಎಂದು ಅವರು ಹೇಳಿದರು.

ಮಹಿಳೆಯರನ್ನು ಸಬಲೀಕರಣಗೊಳಿಸುವ ಸಲುವಾಗಿ, ವಿಧವೆ ಪುನರ್ವಿವಾಹ ಪ್ರೊತ್ಸಾಹನ್ ಯೋಜನೆ’ಯನ್ನು ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಬುಧವಾರ ಪ್ರಾರಂಭಿಸಿದರು, ಇದರ ಅಡಿಯಲ್ಲಿ ಮತ್ತೆ ಮದುವೆಯಾಗುವ ವಿಧವೆಯರಿಗೆ 2 ಲಕ್ಷ ರೂ. ಈ ಯೋಜನೆಯು ವಿಧವೆಯರ ಆತ್ಮ ವಿಶ್ವಾಸಕ್ಕೆ ಉತ್ತೇಜನ ನೀಡುತ್ತದೆ ಮತ್ತು ಮಹಿಳೆಯರ ಮರುವಿವಾಹದ ಬಗ್ಗೆ ಸಾಮಾಜಿಕ ಅಭಿಪ್ರಾಯವನ್ನು ಬದಲಾಯಿಸುತ್ತದೆ ಎಂದು ಕುಮಾರ್ ಅಭಿಪ್ರಾಯ ಪಟ್ಚಿದ್ದಾರೆ.

ರಾಂಚಿಯ ತಾನಾ ಭಗತ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಯೋಜನೆಯ ಏಳು ಫಲಾನುಭವಿಗಳಿಗೆ ಒಟ್ಟು 14 ಲಕ್ಷ ರೂ.ಗಳನ್ನು ವಿತರಿಸಿದರು ಎಂದು ಅವರು ಮಾಹಿತಿ ನೀಡಿದರು.

SCROLL FOR NEXT