ಗಡಿ ಭದ್ರತಾ ಪಡೆ
ಗಡಿ ಭದ್ರತಾ ಪಡೆ 
ದೇಶ

ರಾಜಸ್ಥಾನ: ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರರನ್ನು ಸದೆಬಡಿದ ಬಿಎಸ್ಎಫ್

Ramyashree GN

ನವದೆಹಲಿ: ಶುಕ್ರವಾರ ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಭಾರತದ ಭೂಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ನುಸುಳುಕೋರನನ್ನು ಸದೆಬಡಿದಿದೆ.

ಗಡಿಯಲ್ಲಿ ನಿಯೋಜಿಸಲಾದ ಬಿಎಸ್ಎಫ್ ಪಡೆಗಳು 12.30 ರ ಸುಮಾರಿಗೆ ಸುಂದರಪುರ ಪ್ರದೇಶದಲ್ಲಿ ಭಾರತದ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ನುಸುಳುಕೋರನನ್ನು ಕಂಡಿದ್ದಾರೆ.

ಎಚ್ಚರಿಕೆ ನಡುವೆಯೂ ನುಸುಳುಕೋರ ಒಳನುಗ್ಗಲು ಮುಂದಾಗುತ್ತಿರುವಾಗಲೇ ಬಿಎಸ್‌ಎಫ್ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿವೆ.

ಇಂದು ನಸುಕಿನ 12.30ರ ಸುಮಾರಿಗೆ ಸುಂದರಪುರ ಪ್ರದೇಶದಲ್ಲಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬ ಭಾರತದ ಭೂಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿರುವುದನ್ನು ಶ್ರೀಗಂಗಾನಗರದ ಬಿಎಸ್‌ಎಫ್ ಪತ್ತೆ ಹಚ್ಚಿವೆ. ಕೂಡಲೇ ಆತನನ್ನು ತಡೆಯುವ ಪ್ರಯತ್ನ ಮಾಡಲಾಯಿತು. ಆದರೆ, ಆತ ಗಡಿ ಬೇಲಿಯ ಕಡೆಗೆ ಚಲಿಸುವುದನ್ನು ಮುಂದುವರೆಸಿದರು. ಯಾವುದೇ ಅನಾಹುತವನ್ನು ತಡೆಯುವ ಸಲುವಾಗಿ, ಬಿಎಸ್ಎಫ್ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿತು. ಮೃತ ದೇಹವನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

1965ರ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಭಾರತದ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಬಂಧಿತ ವಿಷಯಗಳಿಗಾಗಿ ಬಿಎಸ್ಎಫ್ ಅನ್ನು ರಚಿಸಲಾಯಿತು.

ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಉದ್ದಕ್ಕೂ ಇರುವ 3,323 ಕಿಮೀ ಇನಿಯಾ-ಪಾಕಿಸ್ತಾನ ಗಡಿಯನ್ನು ಕಾಯಲು ಬಿಎಸ್ಎಫ್ ಪಡೆಗಳನ್ನು ಕಡ್ಡಾಯಗೊಳಿಸಲಾಗಿದೆ.

SCROLL FOR NEXT