ಎನ್.ಚಂದ್ರಬಾಬು ನಾಯ್ಡು, ಅಮಿತ್ ಶಾ
ಎನ್.ಚಂದ್ರಬಾಬು ನಾಯ್ಡು, ಅಮಿತ್ ಶಾ 
ದೇಶ

ಲೋಕಸಭಾ ಚುನಾವಣೆ: ಬಿಜೆಪಿ ಜೊತೆಗೆ ಮೈತ್ರಿ, 17 ಸ್ಥಾನಗಳಲ್ಲಿ ಟಿಡಿಪಿ ಸ್ಪರ್ಧೆ

Nagaraja AB

ನವದೆಹಲಿ: ಪ್ರಾದೇಶಿಕ ಪಕ್ಷವಾಗಿರುವ ತೆಲುಗು ದೇಶಂ ಪಕ್ಷ( ಟಿಡಿಪಿ) ಎನ್ ಡಿಎ ಮೈತ್ರಿಕೂಟ ಸೇರಲು ಸಜ್ಜಾಗಿದೆ. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡುಅವರ ನಡುವೆ ಮಾತುಕತೆ ನಡೆದಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಏಪ್ರಿಲ್-ಮೇನಲ್ಲಿ ನಡೆಯಲಿರುವ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಒಟ್ಟಾಗಿ ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದರು. ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದೆ.

ರಾಜ್ಯದ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ನಾಯ್ಡು, "ಆಂಧ್ರಪ್ರದೇಶವು ಹೀನಾಯವಾಗಿ ನಾಶವಾಗಿದೆ. ಬಿಜೆಪಿ ಮತ್ತು ಟಿಡಿಪಿ ಒಗ್ಗೂಡುವುದು ದೇಶ ಮತ್ತು ರಾಜ್ಯಕ್ಕೆ ಗೆಲುವಿನ ಸನ್ನಿವೇಶವಾಗಿದೆ" ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ದೇಶದಲ್ಲಿ ಹಲವಾರು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಆದರೆ ದಕ್ಷಿಣ ರಾಜ್ಯವು ಹಿಂದುಳಿದಿದೆ. ಸಂಪತ್ತು ಸೃಷ್ಟಿ ಮೋದಿಯವರಿಗೆ ಮೊದಲ ಆದ್ಯತೆಯಾಗಿದ್ದರೆ, ವೈಎಸ್‌ಆರ್ ಕಾಂಗ್ರೆಸ್‌ಗೆ 'ಸಂಪತ್ತು ನಾಶ'ವು ಮೊದಲ ಆದ್ಯತೆಯಾಗಿದೆ ಎಂದು ನಾಯ್ಡು ಹೇಳಿದರು.

ಮೈತ್ರಿಕೂಟದಲ್ಲಿ ಪ್ರತಿ ಪಕ್ಷಗಳು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯನ್ನು ಅವರು ನಿರ್ದಿಷ್ಟಪಡಿಸದಿದ್ದರೂ, ಬಿಜೆಪಿ ಮತ್ತು ಜನಸೇನೆ ಒಟ್ಟಿಗೆ ಎಂಟು ಲೋಕಸಭೆ ಮತ್ತು 30 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

ಇನ್ನುಳಿದ 17 ಲೋಕಸಭೆ ಮತ್ತು 145 ವಿಧಾನಸಭಾ ಸ್ಥಾನಗಳಿಂದ ಟಿಡಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ದಕ್ಷಿಣ ರಾಜ್ಯದ ಆರು ಲೋಕಸಭೆ ಮತ್ತು ಅಷ್ಟೂ ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

SCROLL FOR NEXT