ಶರದ್ ಪವಾರ್ 
ದೇಶ

ವಿಪಕ್ಷ ನಾಯಕರಲ್ಲಿ ಭಯ ಮೂಡಿಸಲು ಬಿಜೆಪಿ ಸರ್ಕಾರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಶರದ್ ಪವಾರ್

ವಿರೋಧ ಪಕ್ಷದ ನಾಯಕರಲ್ಲಿ ಭಯ ಮೂಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದಂತಹ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಸೋಮವಾರ ವಾಗ್ದಾಳಿ ನಡೆಸಿದ್ದು, ಇ.ಡಿಯನ್ನು ಬಿಜೆಪಿಯ 'ಬೆಂಬಲಿತ ಪಕ್ಷ' ಎಂದು ಕರೆದಿದ್ದಾರೆ.

ಪುಣೆ: ವಿರೋಧ ಪಕ್ಷದ ನಾಯಕರಲ್ಲಿ ಭಯ ಮೂಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದಂತಹ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' (ಎನ್‌ಸಿಪಿ (ಎಸ್‌ಪಿ)) ಮುಖ್ಯಸ್ಥ ಶರದ್ ಪವಾರ್ ಸೋಮವಾರ ವಾಗ್ದಾಳಿ ನಡೆಸಿದ್ದು, ಇ.ಡಿಯನ್ನು ಬಿಜೆಪಿಯ 'ಬೆಂಬಲಿತ ಪಕ್ಷ' ಎಂದು ಕರೆದಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005 ಮತ್ತು 2023ರ ನಡುವಿನ ಇ.ಡಿ ಕ್ರಮಗಳ ಅಂಕಿಅಂಶಗಳನ್ನು ಉಲ್ಲೇಖಿಸಿ, ಅದು ಈ ಅವಧಿಯಲ್ಲಿ 5,806 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಅವುಗಳಲ್ಲಿ 25 ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

'ಪ್ರಕರಣಗಳ ವಿಲೇವಾರಿ ದರವು ಶೇ 0.42 ಮತ್ತು ಶಿಕ್ಷೆಯ ಪ್ರಮಾಣವು ಕೇವಲ ಶೇ 0.40 ರಷ್ಟು ಆಗಿದೆ. ಇ.ಡಿಯ ಬಜೆಟ್ 2022ರಲ್ಲಿ 300 ಕೋಟಿ ರೂ.ಗಳಷ್ಟಿತ್ತು. ನಂತರ 404 ಕೋಟಿ ರೂ.ಗಳಿಗೆ ಏರಿದೆ ಎಂದರು.

2005 ಮತ್ತು 2023ರ ನಡುವೆ ಯುಪಿಎ ಸೇರಿದಂತೆ ಎರಡು ಸರ್ಕಾರಗಳು ಅಧಿಕಾರದಲ್ಲಿದ್ದವು. ಯುಪಿಎ ಆಡಳಿತದಲ್ಲಿ ಇ.ಡಿ 26 ನಾಯಕರನ್ನು ತನಿಖೆ ಮಾಡಿದೆ. ಅವರಲ್ಲಿ ಐವರು ಕಾಂಗ್ರೆಸ್ ಮತ್ತು ಮೂವರು ಬಿಜೆಪಿ ನಾಯಕರಾಗಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಇ.ಡಿ ಕ್ರಮವು ರಾಜಕೀಯ ಪ್ರೇರಿತವಾಗಿರಲಿಲ್ಲ. ಆದರೆ, 2014ರ ನಂತರ ಒಬ್ಬನೇ ಒಬ್ಬ ಬಿಜೆಪಿ ನಾಯಕನನ್ನು ವಿಚಾರಣೆಗೆ ಒಳಪಡಿಸಿಲ್ಲ' ಎಂದು ಪವಾರ್ ಹೇಳಿದರು.

ಈ ಅಂಕಿಅಂಶಗಳು ಬಿಜೆಪಿ ಸರ್ಕಾರದ ಅಡಿಯಲ್ಲಿ ಇ.ಡಿ ಕ್ರಮಗಳು ರಾಜಕೀಯ ಪ್ರೇರಿತವಾಗಿವೆ ಎಂಬ ಅನುಮಾನವನ್ನು ಹುಟ್ಟುಹಾಕುತ್ತವೆ. ಇ.ಡಿಯು ಬಿಜೆಪಿಯ ಬೆಂಬಲಿಗ ಪಕ್ಷವಾಗಿ ಮಾರ್ಪಟ್ಟಿರುವುದನ್ನು ಇದು ಸೂಚಿಸುತ್ತದೆ. ಇ.ಡಿ ಕ್ರಮಗಳ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿರುತ್ತದೆ. ಬಿಜೆಪಿಯಿಂದ ಆದೇಶ ಬಂದಂತೆ ತೋರುತ್ತಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇ.ಡಿ ದುರ್ಬಳಕೆಯಾಗಿರಲಿಲ್ಲ, ಆದರೆ ಈಗ ಪ್ರತಿಪಕ್ಷ ನಾಯಕರಲ್ಲಿ ಭಯ ಮೂಡಿಸಲು ತನಿಖಾ ಸಂಸ್ಥೆಯನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಶರದ್ ಪವಾರ್ ಅವರ ಮೊಮ್ಮಗನಾಗಿರುವ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಅವರ ಒಡೆತನದ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT