ಪ್ರಧಾನಿ ನರೇಂದ್ರ ಮೋದಿ PTI
ದೇಶ

ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಮತ್ತೆ ಕ್ಯಾತೆ ತೆಗೆದ ಚೀನಾ

ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿಯನ್ನು ಚೀನಾ ವಿರೋಧಿಸಿದೆ.

ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿಯನ್ನು ಚೀನಾ ವಿರೋಧಿಸಿದೆ. ಈ ಮೂಲಕ ಗಡಿ ಪ್ರದೇಶದ ರಾಜ್ಯದ ಮೇಲೆ ತನ್ನ ಹಕ್ಕಿದೆ ಎಂಬುದನ್ನು ಪುನರುಚ್ಚರಿಸಿದ್ದು, ಭಾರತದ ನಡೆ ಗಡಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆಯಷ್ಟೇ ಎಂಬ ಉದ್ಧಟತನದ ಹೇಳಿಕೆ ನೀಡಿದೆ.

ಶನಿವಾರದಂದು ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ 13000 ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸೆಲಾ ಸುರಂಗವನ್ನು ಲೋಕಾರ್ಪಣೆ ಮಾಡಿದ್ದರು. ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ತವಾಂಗ್ ಗೆ ಎಲ್ಲಾ ಋತುವಿನಲ್ಲೂ ಈ ಸುರಂಗ ಸಂಪರ್ಕ ಕಲ್ಪಿಸಲಿದೆ ಹಾಗೂ ಗಡಿ ಪ್ರದೇಶದ ಉದ್ದಕ್ಕೂ ಸೇನಾ ಪಡೆಗಳ ಉತ್ತಮ ಚಲನೆಯನ್ನು ಸುಗಮಗೊಳಿಸಲಿದೆ.

ಅಸ್ಸಾಂನ ತೇಜ್‌ಪುರದಿಂದ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುರಂಗವು ಇಷ್ಟು ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ರಸ್ತೆ ಸುರಂಗ ಮಾರ್ಗವಾಗಿದೆ.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಹೇಳುವ ಚೀನಾ ಭಾರತದ ಯಾವುದೇ ನಾಯಕ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತದೆ. ಅರುಣಾಚಲ ಪ್ರದೇಶಕ್ಕೆ ಚೀನಾ ತನ್ನದೇ ಆದ ನಾಮಕರಣ ಮಾಡಿದ್ದು ಝಂಗ್ನಾನ್ ಎಂಬ ಹೆಸರನ್ನು ನೀಡಿದೆ.

ಭಾರತ ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕುಗಳನ್ನು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದು, ರಾಜ್ಯ ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದೆ. ಈ ಪ್ರದೇಶಕ್ಕೆ ಚೀನಾ ನಾಮಕರಣ ಮಾಡಿರುವುದನ್ನು ನವದೆಹಲಿ ತಳ್ಳಿಹಾಕಿದ್ದು ಇದರಿಂದ ವಾಸ್ತವವನ್ನು ಬದಲಾಗುವುದಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ, ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

SCROLL FOR NEXT