ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ 
ದೇಶ

ಚುನಾವಣಾ ಆಯುಕ್ತರ ಆಯ್ಕೆ: ಶಾರ್ಟ್-ಲಿಸ್ಟ್ ಮಾಡಿದ ಅಭ್ಯರ್ಥಿಗಳ ವಿವರ ಕೋರಿದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ

Ramyashree GN

ನವದೆಹಲಿ: ಚುನಾವಣಾ ಆಯುಕ್ತರ ಆಯ್ಕೆಗಾಗಿ ಪ್ರಧಾನಿ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ಸಭೆಗೆ ಮುಂಚಿತವಾಗಿ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದು, ದಾಖಲೆಗಳೊಂದಿಗೆ ಶಾರ್ಟ್-ಲಿಸ್ಟ್ ಮಾಡಿದ ಅಭ್ಯರ್ಥಿಗಳ ವಿವರಗಳನ್ನು ಕೋರಿದ್ದಾರೆ.

ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ರಾಜೀವ್ ಮಣಿ ಅವರಿಗೆ ಪತ್ರ ಬರೆದಿರುವ ಚೌಧರಿ, ಚುನಾವಣಾ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿವರಗಳನ್ನು ಅವರ ಬಯೋ-ಡೇಟಾಗಳೊಂದಿಗೆ ಕಳುಹಿಸುವಂತೆ ಕೋರಿದ್ದಾರೆ.

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯ ಭಾಗವಾಗಿರುವ ಕಾಂಗ್ರೆಸ್ ನಾಯಕ, ಕೇಂದ್ರೀಯ ವಿಜಿಲೆನ್ಸ್ ಕಮಿಷನರ್ ನೇಮಕಕ್ಕೆ ಅಳವಡಿಸಿಕೊಂಡಿರುವ ಅಲ್ಲದೆ ಸಿಐಸಿ ಮತ್ತು ಮಾಹಿತಿ ಆಯುಕ್ತರು ಸೇರಿದಂತೆ ಇತರ ಉನ್ನತ ಅಧಿಕಾರಿಗಳ ನೇಮಕಾತಿ ವಿಧಾನವನ್ನು ಅನುಸರಿಸುವಂತೆ ಕಾನೂನು ಸಚಿವಾಲಯದ ಅಧಿಕಾರಿಯನ್ನು ಕೇಳಿದ್ದಾರೆ.

ಸಿಐಸಿ ಮತ್ತು ಸಿವಿಸಿ ಆಯ್ಕೆಗಾಗಿ ಪ್ರಧಾನಿ ನೇತೃತ್ವದ ಸಮಿತಿಯಲ್ಲಿ ಚೌಧರಿ ಕೂಡ ಸದಸ್ಯರಾಗಿದ್ದಾರೆ.

ಸಭೆಗೂ ಮೊದಲು ಚುನಾವಣಾ ಆಯುಕ್ತರ ಹುದ್ದೆಗೆ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳ ಬಯೋ-ಡೇಟಾಗಳೊಂದಿಗೆ 'ದಾಖಲೆಗಳನ್ನು' ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಚೌಧರಿ ಅವರು ಕಾನೂನು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅರುಣ್ ಗೋಯಲ್ ಅವರ ಹಠಾತ್ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ಖಾಲಿಯಾದ ಇಬ್ಬರು ಚುನಾವಣಾ ಆಯುಕ್ತರನ್ನು ಭರ್ತಿ ಮಾಡಲು ಉನ್ನತಾಧಿಕಾರ ಸಮಿತಿಯ ಸಭೆ ಮಾರ್ಚ್ 14ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

SCROLL FOR NEXT