ದ್ವಾರಕ ಸಮುದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ
ದ್ವಾರಕ ಸಮುದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ PTI
ದೇಶ

ಪ್ರಾರ್ಥನೆ ಸಲ್ಲಿಸಲು ನೀರಿನ ಆಳಕ್ಕೆ ಹೋಗುತ್ತಾರೆ, ಆದರೆ ಉದ್ಯೋಗಗಳಿಲ್ಲ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟೀಕೆ

Srinivas Rao BV

ದ್ವಾರಕ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ದ್ವಾರಕದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿರುವ ಭಗವಾನ್ ಕೃಷ್ಣನ ಕಾಲದಲ್ಲಿದ್ದ ನಗರವಿದ್ಧ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ನೀರಿನ ಆಳದಲ್ಲಿ ಇಳಿದಿದ್ದರು. ಈ ಬಗ್ಗೆ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ನೀರಿನ ಆಳಕ್ಕೆ ಇಳಿಯುತ್ತಾರೆ. ಆದರೆ ಹಣದುಬ್ಬರ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ನಾಸಿಕ್‌ನ ಕೃಷಿ ಉತಪನ್ ಬಜಾರ್ ಸಮಿತಿಯಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾಂಗ್ರೆಸ್ ಮುಖ್ಯಸ್ಥ, "ರೈತರ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ ಮತ್ತು ಅಗ್ನಿವೀರರ ಸಮಸ್ಯೆಗಳು ಇಂದು ದೇಶದಲ್ಲಿ ಪ್ರಮುಖವಾಗಿವೆ, ಆದರೆ ಟಿವಿ ಚಾನೆಲ್‌ಗಳಲ್ಲಿ, ಈ ವಿಷಯಗಳ ಕುರಿತು ನೀವು ಎಂದಿಗೂ ಚರ್ಚೆಯನ್ನು ನೋಡುವುದಿಲ್ಲ. "ಬದಲಿಗೆ, ಟಿವಿ ಚಾನೆಲ್‌ಗಳು ಮೋದಿ ಜಿಯನ್ನು 24 ಗಂಟೆಗಳ ಕಾಲ ತೋರಿಸುತ್ತವೆ; ಕೆಲವೊಮ್ಮೆ ಅವರು ಪೂಜೆ ಮಾಡಲು ಸಮುದ್ರದ ಕೆಳಗೆ ಹೋಗುತ್ತಾರೆ ಮತ್ತು ಟಿವಿ ಕ್ಯಾಮೆರಾ ಅವರೊಂದಿಗೆ ಹೋಗುತ್ತದೆ, ನಂತರ ಅವರು ಸೀಪ್ಲೇನ್‌ನಲ್ಲಿ ಹಾರುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

SCROLL FOR NEXT