ಜೈರಾಮ್ ರಮೇಶ್ 
ದೇಶ

'One nation, no election': ಏಕಕಾಲಕ್ಕೆ ಚುನಾವಣೆ ಕುರಿತು ಕೋವಿಂದ್ ವರದಿಗೆ ಕಾಂಗ್ರೆಸ್ ಕಿಡಿ

'ಒಂದು ರಾಷ್ಟ್ರ, ಆದ್ರೆ ಚುನಾವಣೆ ಇಲ್ಲ' ಎಂಬ ಉದ್ದೇಶದಿಂದ ಸಂವಿಧಾನವನ್ನು ಸಂಪೂರ್ಣವಾಗಿ ನಾಶಮಾಡಲು ಬಿಜೆಪಿ ಬಯಸುತ್ತಿದೆ ಎಂದು ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದೆ.

ನವದೆಹಲಿ: 'ಒಂದು ರಾಷ್ಟ್ರ, ಚುನಾವಣೆ ಇಲ್ಲ' ಎಂಬ ಉದ್ದೇಶದಿಂದ ಸಂವಿಧಾನವನ್ನು ಸಂಪೂರ್ಣವಾಗಿ ನಾಶಮಾಡಲು ಬಿಜೆಪಿ ಬಯಸುತ್ತಿದೆ ಎಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಶಿಫಾರಸು ಮಾಡಿದ ನಂತರ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ಸುಮಾರು 18,000 ಪುಟಗಳ ವರದಿಯಲ್ಲಿ, ಕೋವಿಂದ್ ನೇತೃತ್ವದ ಸಮಿತಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಮತ್ತು 100 ದಿನಗಳ ಅಂತರದಲ್ಲಿ ಪುರಸಭೆ ಚುನಾವಣೆ ನಡೆಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಈ ಬಗ್ಗೆ ನಾಸಿಕ್‌ನಲ್ಲಿ ಪಿಟಿಐಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ಅವರ ಉದ್ದೇಶ ತುಂಬಾ ಸ್ಪಷ್ಟವಾಗಿದೆ. ಅವರು ಸ್ಪಷ್ಟ ಬಹುಮತ, ಮೂರನೇ ಎರಡರಷ್ಟು ಬಹುಮತ ಮತ್ತು 400 ಸ್ಥಾನಗಳನ್ನು ಕೇಳುತ್ತಿದ್ದಾರೆ. ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತಾರೆ ಮತ್ತು 'ಒಂದು ರಾಷ್ಟ್ರ, ಚುನಾವಣೆ ಇಲ್ಲ' ಎಂಬುದು ಉದ್ದೇಶ ಎಂದು ಹೇಳಿದ್ದಾರೆ.

ಇದು ರಾಜಕೀಯ ವಿಷಯವಲ್ಲ. ಹಣ ಮತ್ತು ಇತರ ಸಂಪನ್ಮೂಲಗಳನ್ನು ಉಳಿಸುವ ಗುರಿ ಹೊಂದಿದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!

ಕಾವೇರಿ ಕಿಚ್ಚಿನ ಮಧ್ಯೆ ಮಂಡ್ಯದಲ್ಲಿ ಘೋರ ದುರಂತ: ರೈತ ದಂಪತಿ ನೇಣಿಗೆ ಶರಣು; ಸರ್ಕಾರ ಸಮಸ್ಯೆ ಪರಿಹರಿಸಬೇಕು - ಬಿಜೆಪಿ ಆಗ್ರಹ

30 ದಿನ ಜೈಲು ಶಿಕ್ಷೆ ಆದ್ರೆ ಸಿಎಂ, ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕೇ?; ಮಹತ್ವದ ಮಸೂದೆ ಪರಿಶೀಲನೆಗೆ ಸಂಸತ್ ಸಮಿತಿಗೆ ಮತ್ತಷ್ಟು ಕಾಲಾವಕಾಶ

ಕಾವೇರಿ: ಕರ್ನಾಟಕಕ್ಕೆ ಅನ್ಯಾಯಗಳ ಪರಂಪರೆ (ನೇರ ನೋಟ)