ಪ್ರಧಾನಿ ಮೋದಿ
ಪ್ರಧಾನಿ ಮೋದಿ 
ದೇಶ

ಭದ್ರತೆ ಆತಂಕ: ಪ್ರಧಾನಿ ಮೋದಿ ರೋಡ್‌ಶೋಗೆ ಅನುಮತಿ ನಿರಾಕರಿಸಿದ ಕೊಯಮತ್ತೂರು ಪೊಲೀಸರು

Lingaraj Badiger

ಕೊಯಮತ್ತೂರು: ಭದ್ರತೆಯ ಕಾರಣ ನೀಡಿ ಕೊಯಮತ್ತೂರು ಪೊಲೀಸರು ಮಾರ್ಚ್ 18ಕ್ಕೆ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅನುಮತಿ ನಿರಾಕರಿಸಿದ್ದಾರೆ.

ಪ್ರಧಾನಿ ಮೋದಿ ಅವರು ಆರ್‌ಎಸ್ ಪುರಂನಲ್ಲಿ ಸಾರ್ವಜನಿಕ ಭಾಷಣದ ನಂತರ ಸೋಮವಾರ ಸಂಜೆ 4 ರಿಂದ 6 ಗಂಟೆಯವರೆಗೆ ಆರ್‌ಎಸ್ ಪುರಂನಲ್ಲಿರುವ ಏರು ಕಂಪನಿ ಜಂಕ್ಷನ್‌ನಿಂದ ಡಿಬಿ ರಸ್ತೆ ಜಂಕ್ಷನ್‌ವರೆಗೆ 4 ಕಿಲೋಮೀಟರ್ ರೋಡ್‌ಶೋ ನಡೆಸಲು ತಮಿಳುನಾಡು ಬಿಜೆಪಿ ನಿರ್ಧರಿಸಿತ್ತು.

ಈ ಸಂಬಂಧ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಜೆ.ರಮೇಶ್ ಕುಮಾರ್ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಪೊಲೀಸರಿಗೆ ಪತ್ರ ಬರೆದಿದ್ದರು. ವಿವಿಧ ಅಧಿಕಾರಿಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದ ನಂತರ ಶುಕ್ರವಾರ ನಗರ ಪೊಲೀಸರು ರೋಡ್ ಶೋಗೆ ಅನುಮತಿ ನಿರಾಕರಿಸಿದ್ದಾರೆ.

ರಮೇಶ್ ಕುಮಾರ್ ಅವರಿಗೆ ನೀಡಿದ ಉತ್ತರದಲ್ಲಿ, ದೇಶೀಯ ಮತ್ತು ವಿದೇಶಿ ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚಿನ ಭದ್ರತಾ ಆತಂಕ ಇರುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಸ್ವೀಕರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪ್ರತಿಯೊಬ್ಬರನ್ನು ಪರೀಕ್ಷಿಸುವುದು ಸುಲಭ. ಆದರೆ ರೋಡ್‌ಶೋ ಸಮಯದಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ತಪಾಸಣೆ ನಡೆಸುವುದು ಕಷ್ಟಕರ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT