ರಾಜ್ ಕುಮಾರ್ ಚಬ್ಬೇವಾಲ್
ರಾಜ್ ಕುಮಾರ್ ಚಬ್ಬೇವಾಲ್ 
ದೇಶ

ಕಾಂಗ್ರೆಸ್ ತೊರೆದ ಪಂಜಾಬ್ ಹಿರಿಯ ನಾಯಕ ರಾಜ್ ಕುಮಾರ್ ಚಬ್ಬೇವಾಲ್, ಎಎಪಿ ಸೇರುವ ಸಾಧ್ಯತೆ

Lingaraj Badiger

ಚಂಡೀಗಢ: ಪಂಜಾಬ್ ನಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ಹಿರಿಯ ಶಾಸಕ ರಾಜ್ ಕುಮಾರ್ ಚಬ್ಬೇವಾಲ್ ಅವರು ಶುಕ್ರವಾರ ಪಕ್ಷ ತೊರೆದಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ.

ಹೋಶಿಯಾರ್‌ಪುರ ಜಿಲ್ಲೆಯ ಚಬ್ಬೇವಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ 54 ವರ್ಷದ ಚಬ್ಬೇವಾಲ್, "ಐಎನ್‌ಸಿ ಮತ್ತು ಪಂಜಾಬ್ ವಿಧಾನಸಭೆಗೆ ಇಂದು ರಾಜೀನಾಮೆ ನೀಡಿರುವುದಾಗಿ" ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನಾನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಚಬ್ಬೇವಾಲ್ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಮತ್ತು ಅದನ್ನು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ, ಪಕ್ಷ ತೊರೆಯಲು ಅವರು ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮತ್ತೊಂದು ಪತ್ರದಲ್ಲಿ, ಪಂಜಾಬ್ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರಾಗಿರುವ ಚಬ್ಬೇವಾಲ್, "ನಾನು ಈ ಮೂಲಕ ಪಂಜಾಬ್‌ ವಿಧಾನಸಭೆಯ ಸದಸ್ಯತ್ವಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.

ಚಬ್ಬೇವಾಲ್ ಅವರು ಎಎಪಿಗೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದು, ಆಪ್ ಅವರನ್ನು ಹೋಶಿಯಾರ್‌ಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಬಹುದು.

SCROLL FOR NEXT