ಚುನಾವಣಾ ಬಾಂಡ್ (ಸಾಂಕೇತಿಕ ಚಿತ್ರ)
ಚುನಾವಣಾ ಬಾಂಡ್ (ಸಾಂಕೇತಿಕ ಚಿತ್ರ) 
ದೇಶ

ಚುನಾವಣಾ ಆಯೋಗ ಯಾವಾಗಲೂ ಪಾರದರ್ಶಕತೆಯ ಪರವಾಗಿದೆ: ಚುನಾವಣಾ ಬಾಂಡ್ ಬಗ್ಗೆ ರಾಜೀವ್ ಕುಮಾರ್

Lingaraj Badiger

ನವದೆಹಲಿ: ರಾಜಕೀಯ ಪಕ್ಷಗಳ ನಿಧಿಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ಬಗ್ಗೆ ಚುನಾವಣಾ ಆಯೋಗಕ್ಕೆ ಒಲವು ಇದೆ. ಆದರೆ ಪಕ್ಷಗಳಿಗೆ ಹಣ ನೀಡುವವರಿಗೆ ಕಿರುಕುಳ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ ಬಗ್ಗೆ ಪ್ರತಿಕ್ರಿಯಿಸಿದ ರಾಜೀವ್ ಕುಮಾರ್ ಅವರು, ಪ್ರಜಾಪ್ರಭುತ್ವದಲ್ಲಿ ವಿಷಯಗಳನ್ನು ಮುಚ್ಚಿಡಲು ಅವಕಾಶ ಇಲ್ಲ ಎಂದರು.

ರಾಜಕೀಯ ಪಕ್ಷಗಳು ತಮಗೆ ನೀಡುವ ದೇಣಿಗೆಯನ್ನು ಗೌಪ್ಯವಾಗಿಡುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

"ಲೆಕ್ಕ ಇಲ್ಲದ ದೇಣಿಗೆಯನ್ನು ನಾವು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಇಡೀ ದೇಶ ವಿಚಾರ ಮಾಡಬೇಕಾಗಿದೆ" ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. ಚುನಾವಣಾ ಬಾಂಡ್‌ಗಳನ್ನು ಕಾನೂನುಬಾಹಿರಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

2017 ರಲ್ಲಿ ಮೋದಿ ಸರ್ಕಾರ ಈ ಚುನಾವಣಾ ಬಾಂಡ್‌ಗಳನ್ನು ಕಂಪನಿಗಳು 'ಕಪ್ಪುಹಣ'ದ ಬದಲಾಗಿ ವೈಟ್ ಮನಿಯನ್ನೇ ರಾಜಕೀಯ ಪಕ್ಷಗಳಿಗೆ ಕಳುಹಿಸುವ ಮಾರ್ಗವಾಗಿ ಪರಿಚಯಿಸಿತು.

SCROLL FOR NEXT