ತೆಲಂಗಾಣದ ನಾಗರಕರ್ನೂಲ್‌ನಲ್ಲಿ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಮತ್ತು ಇತರರೊಂದಿಗೆ ಪ್ರಧಾನಿ ನರೇಂದ್ರ ಮೋದಿ
ತೆಲಂಗಾಣದ ನಾಗರಕರ್ನೂಲ್‌ನಲ್ಲಿ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಮತ್ತು ಇತರರೊಂದಿಗೆ ಪ್ರಧಾನಿ ನರೇಂದ್ರ ಮೋದಿ 
ದೇಶ

ತೆಲಂಗಾಣದ ಅಭಿವೃದ್ಧಿಯ ಕನಸುಗಳನ್ನು ಕಾಂಗ್ರೆಸ್, ಬಿಆರ್‌ಎಸ್ ಭಗ್ನಗೊಳಿಸಿವೆ: ಪ್ರಧಾನಿ ಮೋದಿ

Sumana Upadhyaya

ಹೈದರಾಬಾದ್: ತೆಲಂಗಾಣ ಅಭಿವೃದ್ಧಿಯ ಪ್ರತಿ ಕನಸನ್ನು ಕಾಂಗ್ರೆಸ್ ಮತ್ತು ಬಿಆರ್ ಎಸ್ ಪಕ್ಷಗಳು ನುಚ್ಚುನೂರು ಮಾಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ನಾಗರಕರ್ನೂಲ್‌ನಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಅದೇ ಬದಲಾವಣೆಯನ್ನು ನಾವೆಲ್ಲ ಸೇರಿ ತೆಲಂಗಾಣದಲ್ಲೂ ತರಬೇಕಿದೆ ಎಂದರು.

ಕಾಂಗ್ರೆಸ್ ಮತ್ತು ಬಿಆರ್‌ಎಸ್ ಒಟ್ಟಾಗಿ ತೆಲಂಗಾಣದ ಅಭಿವೃದ್ಧಿಯ ಪ್ರತಿಯೊಂದು ಕನಸನ್ನು ಭಗ್ನಗೊಳಿಸಿದೆ, ತೆಲಂಗಾಣ ಜನರು ಮೂರನೇ ಬಾರಿಗೆ ಮೋದಿಯನ್ನು ಮರಳಿ ತರಲು ನಿರ್ಧರಿಸಿದ್ದಾರೆ ಎಂಬುದನ್ನು ಇಂದು ಇಲ್ಲಿನ ಜನರಲ್ಲಿ ನೋಡುತ್ತಿದ್ದೇನೆ" ಎಂದರು.

ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಜನರು ಎನ್‌ಡಿಎ 400 ಸ್ಥಾನಗಳನ್ನು ದಾಟುವ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಪಕ್ಷವು 'ಗರೀಬಿ ಹಟಾವೋ' ಘೋಷಣೆಯನ್ನು ನೀಡಿದೆ.ಹಾಗಾದರೆ ಬಡವರ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕೇಳಿದರು.

SCROLL FOR NEXT