ರಾಹುಲ್ ಗಾಂಧಿ
ರಾಹುಲ್ ಗಾಂಧಿ TNIE
ದೇಶ

ಮಾಧ್ಯಮಗಳಿಂದ ನಿರುದ್ಯೋಗ, ಹಣದುಬ್ಬರ ವಿಷಯಗಳ ನಿರ್ಲಕ್ಷ್ಯ; ಜನರೊಂದಿಗಿನ ಸಂವಹನಕ್ಕಾಗಿ ಯಾತ್ರೆ: ರಾಹುಲ್ ಗಾಂಧಿ

Srinivas Rao BV

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗಳ ಬಗ್ಗೆ ಮಾತನಾಡಿದ್ದು, ಮಾಧ್ಯಮಗಳು ನಿರುದ್ಯೋಗ, ಹಣದುಬ್ಬರ ವಿಷಯಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಜನರೊಂದಿಗೆ ಸಂವಹನ ನಡೆಸುವುದಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡಿದ್ದಾಗಿ ಹೇಳಿದ್ದಾರೆ.

ಮುಂಬೈ ನ ಶಿವಾಜಿ ಪಾರ್ಕ್ ನಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಇವಿಎಂ, ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳ ಸಹಾಯವಿಲ್ಲದೇ ಪ್ರಧಾನಿ ಮೋದಿ ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. "ಮೋದಿ ಅವರು ಅಧಿಕಾರಕ್ಕಾಗಿ ಕೆಲಸ ಮಾಡುವ 'ಮುಖವಾಡ'. ಅವರು 56 ಇಂಚಿನ ಎದೆಯನ್ನು ಹೊಂದಿರದ ಆಳವಿಲ್ಲದ ಮನುಷ್ಯ," ಎಂದು ಗಾಂಧಿ ಹೇಳಿದರು.

ಪ್ರಧಾನಿ ಮೋದಿಗೆ ಭ್ರಷ್ಟಾಚಾರದ ಮೇಲೆ ಏಕಸ್ವಾಮ್ಯವಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. "ಶಿವಸೇನೆ ಮತ್ತು ಎನ್‌ಸಿಪಿ ಜನರು ಒಡೆದು ಆಳುವ ಮೈತ್ರಿಕೂಟಕ್ಕೆ ಸೇರಿದರು ಎಂದು ನೀವು ಭಾವಿಸುತ್ತೀರಾ" ಎಂದು ರಾಹುಲ್ ಗಾಂಧಿ ಸಾರ್ವಜನಿಕರನ್ನು ಕೇಳಿದ್ದಾರೆ.

ಮೋದಿಗೆ ಇವಿಎಂ ಗಳಿಲ್ಲದೇ ಚುನಾವಣೆ ಗೆಲ್ಲುವುದು ಅಸಾಧ್ಯ, "ನಾವು VVPAT (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ನ್ನು ಎಣಿಕೆ ಮಾಡುವಂತೆ ನಾವು ಭಾರತದ ಚುನಾವಣಾ ಆಯೋಗವನ್ನು ಕೇಳಿದ್ದೇವೆ. ಆದರೆ ನಮ್ಮ ಬೇಡಿಕೆಯನ್ನು ಸ್ವೀಕರಿಸಲಾಗಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದರು.

SCROLL FOR NEXT